ಅಪ್ರಾಪ್ತೆ ಮೇಲೆ ಪದೇ ಪದೇ ಅತ್ಯಾಚಾರವೆಸಗಿ ಆಕೆಯನ್ನು ಗರ್ಭವತಿಯನ್ನಾಗಿಸಿದ್ದ 66 ವರ್ಷದ ವೃದ್ಧನಿಗೆ ಕೇರಳದ ನ್ಯಾಯಾಲಯವೊಂದು ಬರೋಬ್ಬರಿ 81 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
ತಿರುವನಂತಪುರಂನ ಕ್ಷಿಪ್ರ ವಿಚಾರಣೆ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಪಿ.ಜಿ. ವರ್ಗೀಸ್ ಮಂಗಳವಾರದಂದು ಈ ತೀರ್ಪು ಪ್ರಕಟಿಸಿದ್ದು, ಅಪರಾಧಿಗೆ ಜೈಲು ಶಿಕ್ಷೆ ಜೊತೆಗೆ 2.2 ಲಕ್ಷ ರೂಪಾಯಿಗಳ ದಂಡವನ್ನು ಸಹ ವಿಧಿಸಲಾಗಿದೆ.
ಇಡುಕ್ಕಿ ಜಿಲ್ಲೆಯಲ್ಲಿ ನಡೆದ ಈ ಘಟನೆಯ ವಿಸ್ತೃತ ವಿಚಾರಣೆ ನಡೆಸಿದ ನ್ಯಾಯಾಧೀಶರು ಅತ್ಯಾಚಾರಕ್ಕೆ 20 ವರ್ಷ, ಗರ್ಭವತಿಯನ್ನಾಗಿಸಿದ್ದಕ್ಕೆ 30 ವರ್ಷ, ಪೋಕ್ಸೋ ಕಾಯ್ದೆ ಅಡಿ 5 ವರ್ಷ ಹಾಗೂ ಇತರ ಸೆಕ್ಷನ್ ಗಳ ಅಡಿಯಲ್ಲಿ ಬಾಕಿ ಉಳಿದ ಕಾರಾಗೃಹ ಶಿಕ್ಷೆಯನ್ನು ವಿಧಿಸಿದ್ದಾರೆ.