alex Certify BIG NEWS: ಅಧಿಕೃತ ಪಕ್ಷದ ಮಾನ್ಯತೆ ಕಳೆದುಕೊಂಡ ಜೆಡಿಎಸ್…! ಸ್ಥಾನಮಾನ ನೀಡುವ ವಿಚಾರ ಮುಂಬರುವ ವಿಧಾನಸಭಾಧ್ಯಕ್ಷರ ವಿವೇಚನೆಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಧಿಕೃತ ಪಕ್ಷದ ಮಾನ್ಯತೆ ಕಳೆದುಕೊಂಡ ಜೆಡಿಎಸ್…! ಸ್ಥಾನಮಾನ ನೀಡುವ ವಿಚಾರ ಮುಂಬರುವ ವಿಧಾನಸಭಾಧ್ಯಕ್ಷರ ವಿವೇಚನೆಗೆ

ಈ ಬಾರಿ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನವೇ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ರಣೋತ್ಸಹದಿಂದ ಕಣಕ್ಕಿಳಿದಿದ್ದ ಜೆಡಿಎಸ್, ಫಲಿತಾಂಶದಲ್ಲಿ ತೀವ್ರ ನಿರಾಸೆಯನ್ನು ಅನುಭವಿಸಿದೆ. ಕೇವಲ 19 ಕ್ಷೇತ್ರಗಳಲ್ಲಿ ಆ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.

224 ಸದಸ್ಯ ಬಲದ ವಿಧಾನಸಭೆಯಲ್ಲಿ ಅಧಿಕೃತ ಪಕ್ಷದ ಸ್ಥಾನಮಾನ ಸಿಗಬೇಕಾದರೆ ಒಟ್ಟು ಸ್ಥಾನಗಳಲ್ಲಿ ಹತ್ತನೇ ಒಂದರಷ್ಟು ಅಂದರೆ 22 ಸ್ಥಾನಗಳಲ್ಲಿ ಜೆಡಿಎಸ್ ಗೆಲ್ಲಬೇಕಾಗಿದ್ದು, ಹೀಗಾಗಿ ಈ ಬಾರಿ ಅಧಿಕೃತ ಪಕ್ಷದ ಸ್ಥಾನಮಾನ ಸಿಗುವುದು ಅನುಮಾನವಾಗಿದೆ.

ನಿಯಮದ ಪ್ರಕಾರ ಜೆಡಿಎಸ್ ಗೆ ಅಧಿಕೃತ ಪಕ್ಷದ ಸ್ಥಾನಮಾನ ಸಿಗುವುದಿಲ್ಲವಾದರೂ ಸಹ ರಾಜ್ಯದ ಅತ್ಯಂತ ಹಳೆಯ ಪಕ್ಷವಾಗಿರುವುದು ಜೊತೆಗೆ ಆ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡರು ಮಾಜಿ ಪ್ರಧಾನಿಗಳಾಗಿರುವುದರಿಂದ ವಿಧಾನಸಭೆಯಲ್ಲಿ ಅಧಿಕೃತ ಪಕ್ಷದ ಮಾನ್ಯತೆ ಮತ್ತು ಕೊಠಡಿ ನೀಡುವ ವಿಚಾರವನ್ನು ಮುಂಬರುವ ವಿಧಾನಸಭಾ ಅಧ್ಯಕ್ಷರ ವಿವೇಚನೆಗೆ ಬಿಟ್ಟಿದ್ದು ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...