ಮೈಸೂರು: ನಾಯಕತ್ವ ಬದಲಾವಣೆ ವಿಚಾರ ಚರ್ಚಿಸುವ ಸಮಯ ಇದಲ್ಲ. ಏನಾದರೂ ಹೇಳಬೇಕೆಂದಿದ್ದರೆ ಸಿ.ಪಿ.ಯೋಗೇಶ್ವರ್ ಸ್ಪಷ್ಟವಾಗಿ ಅವರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಹೇಳಬೇಕು ಈ ರೀತಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ಮದುವೆ ಖರ್ಚು ಕಡಿಮೆ ಮಾಡುವುದಾಗಿ ಹೆತ್ತವರು ಹೇಳಿದ್ದಕ್ಕೆ ಮನೆ ಬಿಟ್ಟು ಹೋಗ್ತೀನಿ ಅಂದ್ಲು ಮದುಮಗಳು
ಮೈಸೂರಿನಲ್ಲಿ ಮಾತನಾಡಿದ ಸಚಿವರು, ನಾಯಕತ್ವ ಬದಲಾವಣೆ ಕುರಿತಾಗಿ ಹಾದಿ ಬೀದಿಯಲ್ಲಿ ಚರ್ಚೆ ನಡೆಯಬಾರದು. ಏನೇ ವಿಷಯಗಳನ್ನು ಚರ್ಚಿಸಬೇಕೆಂದರೆ ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸಲಿ, ಅಸಮಾಧಾನ ಬಗೆಹರಿಸಿಕೊಳ್ಳಲಿ. ಅದನ್ನು ಬಿಟ್ಟು ಯೋಗೇಶ್ವರ್ ದ್ವಂದ್ವವಾಗಿ ಮಾತನಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಹೆಚ್ಚು ದುಡಿಯುವ ಪುರುಷರ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ…!
ಇದೇ ವೇಳೆ ಸಚಿವ ಈಶ್ವರಪ್ಪ ಹೇಳಿಕೆಗೂ ಸ್ಪಷ್ಟನೆ ನಿಡಿದ ಬಿ.ಸಿ.ಪಾಟೀಲ್, ನಮ್ಮ ಪಕ್ಷದಲ್ಲಿ ಹೊರಗಿನಿಂದ ಬಂದವರು, ಒಳಗಿನಿಂದ ಬಂದವರು ಎಂಬ ಪ್ರಶ್ನೆ ಇಲ್ಲ. ಒಮ್ಮೆ ಮನೆಗೆ ಸೊಸೆ ಬಂದು ಮೊಳೆ ಹೊಡೆದರೆ ಆಕೆ ಮನೆ ಮಗಳು ಅಷ್ಟೆ. ಅದೇ ರೀತಿ ಒಮ್ಮೆ ಪಕ್ಷಕ್ಕೆ ಬಂದ ಮೇಲೆ ಅದರಲ್ಲಿ ಚರ್ಚೆ ಬೇಡ. ಮನೆ ಅಂದ ಮೆಲೆ ಅಣ್ಣ-ತಮ್ಮಂದಿರ ಮಧ್ಯೆ ವ್ಯತ್ಯಾಸವಿರುತ್ತೆ, ಟೀಕೆ, ಟಿಪ್ಪಣಿಗಳು ಸಹಜ, ಐದು ಬೆರಳುಗಳು ಸರಿ ಇರಲ್ಲ. ಇಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಜ್ಯಕ್ಕೆ ಭೇಟಿ ನಿಡಲಿದ್ದು ಅಸಮಾಧಾನಗಳನ್ನು ಶಮನ ಮಾಡಲಿದ್ದಾರೆ ಎಲ್ಲಾ ಗೊಂದಲಕ್ಕೂ ತೆರೆ ಎಳೆಯಲಿದ್ದಾರೆ ಎಂದರು.