alex Certify ಹೆಚ್ಚು ದುಡಿಯುವ ಪುರುಷರ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಚ್ಚು ದುಡಿಯುವ ಪುರುಷರ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ…!

ಮನೆಗೆ ದೊಡ್ಡ ಸಂಬಳ ತರುವ ವಿವಾಹಿತ ಪುರುಷರು ದೈನಂದಿನ ಮನೆಗೆಲಸದಲ್ಲಿ ಹೇಳಿಕೊಳ್ಳುವಂಥ ಸಹಾಯ ಮಾಡುವುದಿಲ್ಲ ಎಂದು ಅಧ್ಯಯನವೊಂದು ತಿಳಿಸಿದೆ. ಇಂಥ ಪುರುಷರು ಹೆಚ್ಚು ದುಡಿಯಲು ಅಗತ್ಯವಿರುವ ಎನರ್ಜಿಯನ್ನು ಸಂರಕ್ಷಿಸಿಕೊಳ್ಳಲು ನೋಡುವ ಕಾರಣ ಮನೆಗೆಲಸಕ್ಕೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಇಂಡಿಯಾನಾದ ನೋಟ್ರೆಡ್ಯಾಂ ವಿವಿಯ ಸಂಶೋಧಕರು ನಡೆಸಿರುವ ಅಧ್ಯಯನ ತಿಳಿಸಿದೆ.

ಇಂದಿನ ಮನಃಶಾಸ್ತ್ರದ ಪ್ರಕಾರ, ಮಾನವರ ವ್ಯಕ್ತಿತ್ವವನ್ನು ವಿಶ್ಲೀಷಿಸಲು ಐದು ಆಯಾಮಗಳನ್ನು ಪರಿಗಣಿಸಲಾಗುತ್ತದೆ. ಯಾರಲ್ಲಿ ಕರುಣೆ, ಸಿಂಪತಿ, ಸಹಕಾರೀ ಮನೋಭಾವ ಹಾಗೂ ಸತ್ಕಾರೀ ಗುಣಗಳಿವೆಯೋ ಅವರು ಹೆಚ್ಚಿನ ಸಮ್ಮತಿಯುಳ್ಳವರಾಗಿದ್ದು, ಯಾರಲ್ಲಿ ಈ ಮೇಲ್ಕಂಡ ಗುಣಗಳು ಕಂಡುಬರುವುದಿಲ್ಲವೋ ಅವರು ಸ್ವಯಂ ಕೇಂದ್ರಿತರಾಗಿದ್ದು, ಸ್ಫರ್ಧಾತ್ಮಕರಾಗಿರುತ್ತಾರೆ ಎಂದು ಅಧ್ಯಯನ ತಿಳಿಸುತ್ತದೆ.

28 ದಿನಗಳ ಪ್ಯಾಕ್‌ ಕುರಿತು ಟೆಲಿಕಾಂ ಸಂಸ್ಥೆಗಳಿಂದ ʼಟ್ರಾಯ್‌ʼ ಮುಂದೆ ಈ ಬೇಡಿಕೆ

“ಸುಲಭದಲ್ಲಿ ಸಮ್ಮತಿ ಕೊಡದ ಮಂದಿ, ಸುಲಭವಾಗಿ ಸಮ್ಮತಿಯಾಗುವವರಿಗಿಂತ ಹೆಚ್ಚಾಗಿ ಹಣ ಸಂಪಾದಿಸುತ್ತಾರೆ ಏಕೆಂದರೆ ಅವರು ಸ್ವಯಂ ಕೇಂದ್ರಿತ ಮನಃಸ್ಥಿತಿಯುಳ್ಳವರಾಗಿದ್ದು, ಅವರ ಮನೆಗಳಲ್ಲಿ ಮಡದಿಯರಿಗೆ ಸಹಾಯ ಮಾಡುವುದಿಲ್ಲ. ಉದ್ಯೋಗದಲ್ಲಿ ಹೆಚ್ಚಿನ ಒಳಗೊಳ್ಳುವಿಕೆ ಹಾಗೂ ಅಂತಿಮವಾಗಿ ಹೆಚ್ಚಿನ ವೇತನ ಪಡೆಯಲು ಅವರು ತಮ್ಮ ಗಮನ ಕೇಂದ್ರೀಕರಿಸಿರುತ್ತಾರೆ” ಎಂದು ನೋಟ್ರೆಡೇಮ್‌‌ನ ಮೆಂಡೋಜ಼ಾ ಕಾಲೇಜ್ ಆಫ್ ಬ್ಯುಸಿನೆಸ್‌ನ ಮ್ಯಾನೇಜ್ಮೆಂಟ್ ಪ್ರಾಧ್ಯಾಪಕ ಬ್ರಿಟ್ಟಾನಿ ಸೋಲೋಮನ್ ತಿಳಿಸುತ್ತಾರೆ.

ಲಾಕ್‌ ಡೌನ್‌ ಸಡಿಲಿಕೆಯಾಗುತ್ತಲೇ ರಸ್ತೆಗಿಳಿದ ಪ್ರವಾಸಿಗರ ದಂಡು: ಚಂಡೀಗಡ – ಶಿಮ್ಲಾ ಹೆದ್ದಾರಿ ಜಾಮ್

ಅದರಲ್ಲೂ ಸಮ್ಮತಿಯಾಗದ ಪುರುಷರಿಗೆ ಮೃದು ಧೋರಣೆಯ ಮಡದಿಯರು ಸಂಗಾತಿಯಾಗಿ ಸಿಕ್ಕಲ್ಲಿ, ಅಂಥ ಪುರುಷರು ಹೆಚ್ಚಾಗಿ ಸಾಂಪ್ರದಾಯಿಕವಾಗಿ ಲಿಂಗಾಧರಿತ ವರ್ತನೆಗಳತ್ತ ವಾಲುತ್ತಾರೆ ಎಂದು ಸೋಲೋಮನ್ ತಿಳಿಸುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...