alex Certify BIG NEWS: ಅಗ್ನಿಪಥ್‌ ಯೋಜನೆಗಾಗಿ ʼಅಗ್ನಿವೀರʼರ ನೇಮಕಾತಿ: ನೌಕಾಪಡೆಯಲ್ಲಿ ಶೇ.20ರಷ್ಟು ಹುದ್ದೆ ಮಹಿಳೆಯರಿಗೆ ಮೀಸಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಗ್ನಿಪಥ್‌ ಯೋಜನೆಗಾಗಿ ʼಅಗ್ನಿವೀರʼರ ನೇಮಕಾತಿ: ನೌಕಾಪಡೆಯಲ್ಲಿ ಶೇ.20ರಷ್ಟು ಹುದ್ದೆ ಮಹಿಳೆಯರಿಗೆ ಮೀಸಲು

ಅಗ್ನಿಪಥ್ ನೇಮಕಾತಿ ಯೋಜನೆಯಲ್ಲಿ ಮಹಿಳೆಯರಿಗೂ ಪ್ರಾತಿನಿಧ್ಯ ಸಿಗ್ತಾ ಇದೆ. ಅಗ್ನಿವೀರ್‌ಗಳ ಮೊದಲ ಬ್ಯಾಚ್‌ನಲ್ಲಿ ಶೇ.20 ಅಭ್ಯರ್ಥಿಗಳು ಮಹಿಳೆಯರಾಗಿರುತ್ತಾರೆ ಎಂದು ಭಾರತೀಯ ನೌಕಾಪಡೆಯ ಅಧಿಕಾರಿಗಳು ಹೇಳಿದ್ದಾರೆ. ಇವರನ್ನು ನೌಕಾಪಡೆಯ ವಿವಿಧ ಭಾಗಗಳಿಗೆ ಮತ್ತು ಶಾಖೆಗಳಿಗೆ ನೇಮಕ ಮಾಡಲಾಗುತ್ತದೆ.

ಭಾರತೀಯ ನೌಕಾಪಡೆಯು 2022ರಲ್ಲಿ 3000 ‘ಅಗ್ನಿವೀರ’ರನ್ನು ಸೇರ್ಪಡೆ ಮಾಡಿಕೊಳ್ಳಲು ಸಜ್ಜಾಗಿದೆ. ಜುಲೈ 1 ರಂದು ಮೊದಲ ಬ್ಯಾಚ್‌ಗಾಗಿ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಸುಮಾರು 10,000 ಮಹಿಳೆಯರು ಹೆಸರು ನೋಂದಾಯಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಭಾರತೀಯ ನೌಕಾಪಡೆಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜೂನ್ 15 ರಿಂದ ಆರಂಭವಾಗಿದ್ದು, ಜುಲೈ 30ರವರೆಗೂ ಕಾಲಾವಕಾಶವಿದೆ. ಅಗ್ನಿವೀರರ ನೇಮಕಾತಿಯಲ್ಲಿ ಪುರುಷರು ಮಹಿಳೆಯರೆಂಬ ಬೇಧ ಭಾವವಿರುವುದಿಲ್ಲ. ನೇಮಕಾತಿ ಲಿಂಗ ತಟಸ್ಥವಾಗಿರಲಿದೆ ಎಂದು ಈಗಾಗ್ಲೇ ವೈಸ್ ಅಡ್ಮಿರಲ್ ದಿನೇಶ್ ತ್ರಿಪಾಠಿ ತಿಳಿಸಿದ್ದಾರೆ.

ಭಾರತೀಯ ನೌಕಾಪಡೆಯಲ್ಲಿ ಈಗಾಗ್ಲೇ 30 ಮಹಿಳಾ ಅಧಿಕಾರಿಗಳು ವಿವಿಧ ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ. ಹಾಗಾಗಿ ಅಗ್ನಿಪಥ್ ಯೋಜನೆಯಡಿಯಲ್ಲಿ ಮಹಿಳೆಯರನ್ನು ನೇಮಿಸಿಕೊಳ್ಳಲು ನಿರ್ಧರಿಸಿದ್ದೇವೆ. ಅವರನ್ನು ಯುದ್ಧನೌಕೆಗಳಲ್ಲಿಯೂ ನಿಯೋಜಿಸಲಾಗುವುದು ಎಂದು ತ್ರಿಪಾಠಿ ಅಭಯ ನೀಡಿದ್ದಾರೆ.

ನವೆಂಬರ್ 21 ರಿಂದ ಒಡಿಶಾದ INS ಚಿಲ್ಕಾದಲ್ಲಿ ನೌಕಾಪಡೆಯ ಮೊದಲ ಬ್ಯಾಚ್‌ನ ಅಗ್ನಿವೀರರಿಗೆ ತರಬೇತಿ ಆರಂಭವಾಗಲಿದೆ. ಆದ್ರೆ  ‘ ಅಗ್ನಿಪಥ್ ಯೋಜನೆಯ ವಿರುದ್ಧ ಪ್ರತಿಭಟನೆ ಮತ್ತು ವಿಧ್ವಂಸಕ ಕೃತ್ಯಗಳ ಭಾಗವಾಗಿರುವ  ಆಕಾಂಕ್ಷಿಗಳಿಗೆ ಸೇನೆಯಲ್ಲಿ ಸ್ಥಾನವಿಲ್ಲ’ ಎಂದು ಮಿಲಿಟರಿ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಸ್ಪಷ್ಟಪಡಿಸಿದ್ದಾರೆ.

ಶಿಸ್ತು ಭಾರತೀಯ ಸೇನೆಯ ಅಡಿ. ಇಲ್ಲಿ ಹಿಂಸೆ, ಪ್ರತಿಭಟನೆ ಅಥವಾ ವಿಧ್ವಂಸಕ ಕೃತ್ಯಗಳಿಗೆ ಜಾಗವಿಲ್ಲ. ಸೇನೆ ಸೇರಲು ಅರ್ಜಿ ಸಲ್ಲಿಸುವವರು ಇಂತಹ ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಎಂಬ ಬಗ್ಗೆ ಪ್ರಮಾಣ ಪತ್ರ ನೀಡಬೇಕು. ಪೊಲೀಸರು ಇದನ್ನು ಪರಿಶೀಲನೆ ನಡೆಸಲಿದ್ದಾರೆ. ಆಕಾಂಕ್ಷಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೆ ಅಂಥವರು ಸೇನೆ ಸೇರಲು ಸಾಧ್ಯವಿಲ್ಲ ಎಂದು ಅನಿಲ್‌ ಪುರಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...