alex Certify BIG NEWS: ʼಸ್ಪಾಟ್​ ಫಿಕ್ಸಿಂಗ್ʼ​ ಪ್ರಕರಣ ಕುರಿತಂತೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಶ್ರೀಶಾಂತ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ʼಸ್ಪಾಟ್​ ಫಿಕ್ಸಿಂಗ್ʼ​ ಪ್ರಕರಣ ಕುರಿತಂತೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಶ್ರೀಶಾಂತ್

ಸ್ಪಾಟ್​​ ಫಿಕ್ಸಿಂಗ್​ ಪ್ರಕರಣದಲ್ಲಿ ಸಿಲುಕಿದ ಅನೇಕ ವರ್ಷಗಳ ಬಳಿಕ ಟೀಂ ಇಂಡಿಯಾದ ಮಾಜಿ ವೇಗಿ ಶ್ರೀಶಾಂತ್​ ನಿಜವಾಗಿಯೂ ಅಲ್ಲಿ ನಡೆದಿದ್ದು ಏನು ಅನ್ನೋದನ್ನು ಬಾಯ್ಬಿಟ್ಟಿದ್ದಾರೆ.

2013ರಲ್ಲಿ ಶ್ರೀಶಾಂತ್​ ಹಾಗೂ ರಾಜಸ್ಥಾನ ರಾಯಲ್ಸ್​ ತಂಡದ ಇಬ್ಬರು ಆಟಗಾರರು ಸ್ಪಾಟ್​ ಫಿಕ್ಸಿಂಗ್​ ಹಗರಣದಲ್ಲಿ ಸಿಲುಕುವ ಮೂಲಕ ಸುದ್ದಿಯಾಗಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಶ್ರೀಶಾಂತ್​ ಕೇವಲ 10 ಲಕ್ಷ ರೂಪಾಯಿ ಆಸೆಗಾಗಿ ನಾನು ಇಂತಹ ಕೆಲಸ ಏಕೆ ಮಾಡಲಿ ಎಂದು ಹೇಳಿದ್ದಾರೆ.

ನಾನು ಇರಾನಿ ಟ್ರೋಫಿಯನ್ನು ಆಡಿದ್ದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾಗಿಯಾಗಲು ಕಾತುರನಾಗಿದ್ದೆ. ಸರಣಿಗಳಲ್ಲಿ ಆಡುವುದೇ ನನ್ನ ಗುರಿಯಾಗಿತ್ತು. ಈ ರೀತಿ ಯೋಚನೆ ಮಾಡುವ ನಾನು ಕೇವಲ 10 ಲಕ್ಷ ರೂಪಾಯಿಗಾಗಿ ಇಂತಹ ಕೆಲಸ ಏಕೆ ಮಾಡಲಿ..? ನಾನು ಇದನ್ನೆಲ್ಲ ಹೇಳಬಾರದು. ಆದರೆ ನಾನೊಂದು ಪಾರ್ಟಿಗೆ ಹೋದರೆ 2 ಲಕ್ಷ ರೂಪಾಯಿ ಬಿಲ್​ ಆಗುತ್ತದೆ. ಅಂತದ್ರಲ್ಲಿ ಕೇವಲ 10 ಲಕ್ಷಕ್ಕೆ ಈ ಕೆಲಸ ಮಾಡುತ್ತೇನಾ..? ಎಂದು ಹೇಳಿದ್ದಾರೆ.

ಈ ಕಠಿಣ ಪರಿಸ್ಥಿತಿಯಿಂದ ಹೊರಬರಲು ನನಗೆ ಅಭಿಮಾನಿಗಳು ಹಾಗೂ ಆಪ್ತರು ಸಹಾಯ ಮಾಡಿದ್ದಾರೆ. ನಾನು ಅನೇಕರಿಗೆ ಸಹಾಯ ಮಾಡಿದ್ದೇನೆ. ಅವರ ಪ್ರಾರ್ಥನೆಗಳು ನನ್ನನ್ನು ಕಾಯುತ್ತವೆ ಎಂಬ ನಂಬಿಕೆಯಿದೆ ಎಂದು ಹೇಳಿದ್ದಾರೆ.

ಇದೇ ಮೊದಲ ಬಾರಿಗೆ ನಾನು ಸ್ಪಾಟ್​ ಫಿಕ್ಸಿಂಗ್​ ಬಗ್ಗೆ ಇಷ್ಟೊಂದು ಮಾತನಾಡುತ್ತಿದ್ದೇನೆ.ಅಂದಿನ ಪಂದ್ಯದಲ್ಲಿ 1 ಓವರ್​ನಲ್ಲಿ 14ಕ್ಕೂ ಹೆಚ್ಚು ರನ್ ಅವಶ್ಯಕತೆ ಇತ್ತು. ಮೊದಲ ನಾಲ್ಕು ಎಸೆತಗಳಲ್ಲಿ ನಾನು ಕೇವಲ ಐದು ರನ್​ಗಳನ್ನು ನೀಡಿದ್ದೆ. ಐಪಿಎಲ್​ನಲ್ಲಿ ನಾನು ಯಾವುದೇ ನೋ ಬಾಲ್​ ಅಥವಾ ವೈಡ್​ಗಳನ್ನು ಎಸೆದಿರಲಿಲ್ಲ. ಇಷ್ಟೇ ಯಾಕೆ ನಾನು ನಿಧಾನಗತಿಯ ಬೌಲಿಂಗ್​ ನ್ನು ಮಾಡಿಲ್ಲ. ಕಾಲಿನಲ್ಲಿ 12 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ಸಹ ನಾನು 130 ಕಿಲೋಮೀಟರ್​ ಪ್ರತಿ ಗಂಟೆ ವೇಗದಲ್ಲಿ ಬೌಲಿಂಗ್​ ಮಾಡುತ್ತಿದ್ದೆ ಎಂದು ಹೇಳಿದ್ದಾರೆ

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...