ಕೊರೊನಾ ವೈರಸ್ ಸೃಷ್ಟಿಸಿದ ಪರಿಸ್ಥಿತಿ ಹಾಗೂ ಲಾಕ್ಡೌನ್ ನಿರ್ಬಂಧಗಳಿಂದಾಗಿ ಡೇಟಿಂಗ್ ಆ್ಯಪ್ಗಳತ್ತ ಮುಖಮಾಡುವವರ ಸಂಖ್ಯೆ ಹೆಚ್ಚಾಗಿದೆ. ಡೇಟಿಂಗ್ ಅಪ್ಲಿಕೇಶನ್ಗಳಲ್ಲಿ ಒಂದಾದ ಬಂಬಲ್ ಭಾರತೀಯ ಬಳಕೆದಾರರ ಕುರಿತಂತೆ ಅಧ್ಯಯನವೊಂದನ್ನು ಮಾಡಿದ್ದು ಇದರಲ್ಲಿ ಭಾರತೀಯರು ಸೆಕ್ಸ್ ಬಗ್ಗೆ ಮಾತನಾಡುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಎಂದು ಹೇಳಿದೆ.
ಹೊಸ ವಾಹನ ಖರೀದಿ ಮಾಡುವವರಿಗೊಂದು ಗುಡ್ ನ್ಯೂಸ್…..! ಇದ್ರಲ್ಲಿ ಸಿಗ್ತಿದೆ ಶೇ.25ರಷ್ಟು ರಿಯಾಯಿತಿ
ಬಂಬಲ್ ಬಳಕೆ ಮಾಡುವವರ ಪೈಕಿ ಭಾರತೀಯರ ಸಂಖ್ಯೆಯೇ ಹೆಚ್ಚಿದೆ. ಬಂಬಲ್ ಆ್ಯಪ್ ಬಳಕೆ ಮಾಡುವವರ ಪೈಕಿ 34 ಪ್ರತಿಶತ ಮಂದಿ ಭಾರತೀಯರೇ ಆಗಿದ್ದಾರೆ. ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಹಾಗೂ ಕೆನಡಾದ ಜನತೆಗೆ ಹೋಲಿಕೆ ಮಾಡಿದರೆ ಈ ಅಪ್ಲಿಕೇಶನ್ನ ಪ್ರಕಾರ ಸೆಕ್ಸ್ ಬಗ್ಗೆ ಮಾತನಾಡುವುದರಲ್ಲಿ ಭಾರತೀಯ ಬಳಕೆದಾರರೇ ಮುಂಚೂಣಿಯಲ್ಲಿದ್ದಾರಂತೆ.
ಜುಲೈ ತಿಂಗಳಲ್ಲಿ ಬಂಬಲ್ ಆಸ್ಟ್ರೇಲಿಯಾ, ಅಮೆರಿಕ, ಬ್ರಿಟನ್, ಕೆನಡಾ ಹಾಗೂ ಭಾರತದಲ್ಲಿ ಸಮೀಕ್ಷೆಯಲ್ಲಿ ನಡೆಸಿತ್ತು, ಈ ಸಮೀಕ್ಷೆಗೆ ಭಾರತದ 2003 ವಯಸ್ಕರನ್ನು ಒಳಪಡಿಸಲಾಗಿತ್ತು.
ಸ್ವಂತ ಸೂರು ಹೊಂದುವ ಕನಸು ಕಾಣುತ್ತಿದ್ದವರಿಗೆ ಬಿಗ್ ಶಾಕ್…! ಮುಗಿಲು ಮುಟ್ಟಿದ ಸಿಮೆಂಟ್ ಬೆಲೆ
ಇದರಲ್ಲಿ 65 ಪ್ರತಿಶತ ಭಾರತೀಯರು ಸಾಂಕ್ರಾಮಿಕದ ಸಂದರ್ಭದಲ್ಲಿಯೇ ಸೆಕ್ಸ್ ಕುರಿತಾಗಿ ತಮ್ಮ ದೃಷ್ಠಿಕೋನ ಬದಲಾಗಿದೆ ಎಂದು ಹೇಳಿದ್ದಾರೆ. 37 ಪ್ರತಿಶತ ಭಾರತೀಯರು ತಾವು ಡೇಟಿಂಗ್ ಮಾಡುವವರ ಜೊತೆ ತಮ್ಮ ಆಸೆಗಳನ್ನು ಹಂಚಿಕೊಳ್ಳಲು ಹೆಚ್ಚು ಮುಕ್ತರಾಗಿದ್ದಾರೆ. 33 ಪ್ರತಿಶತ ಮಂದಿ ತಾವು ಡೇಟಿಂಗ್ ಅಪ್ಲಿಕೇಶನ್ನಲ್ಲಿ ಹುಡುಕಿಕೊಂಡ ಸಂಗಾತಿಯ ಜೊತೆ ವಾಸಿಸಲು ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಬಲ್ ಸಮೀಕ್ಷೆಯಲ್ಲಿ ತಿಳಿದು ಬಂದ ಮತ್ತೊಂದು ವಿಚಾರ ಏನೆಂದರೆ ಸುಮಾರು 47 ಪ್ರತಿಶತ ಮಂದಿ ಸೆಕ್ಸ್ ವಿಚಾರದಲ್ಲಿ ತಮಗೆ ಏನು ಬೇಕು ಎನ್ನುವುದನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ. ಲಾಕ್ಡೌನ್ ನಿರ್ಬಂಧದ ಸಂದರ್ಭದಲ್ಲಿ 60 ಪ್ರತಿಶತ ಭಾರತೀಯರು ಸೆಕ್ಸ್ ವಿಚಾರದಲ್ಲಿ ಹೆಚ್ಚು ಆಸಕ್ತಿಯನ್ನು ತೋರಿದ್ದಾರೆ ಎಂದು ತಿಳಿದು ಬಂದಿದೆ.