alex Certify BIG NEW: ಪ್ರವಾಸಕ್ಕೆಂದು ಬಂದಿದ್ದ ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ; ಆರೋಪಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEW: ಪ್ರವಾಸಕ್ಕೆಂದು ಬಂದಿದ್ದ ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ; ಆರೋಪಿ ಅರೆಸ್ಟ್

ಪಣಜಿ: ಗೋವಾಗೆ ಪ್ರವಾಸಕ್ಕೆಂದು ಬಂದಿದ್ದ 12 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯನ್ನು ಗದಗ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ರಷ್ಯಾದಿಂದ ಗೋವಾಗೆ ಪ್ರವಾಸಕ್ಕೆ ಬಂದಿದ್ದ ಬಾಲಕಿ ಮೇಲೆ ಮೇ 6ರಂದು ಅತ್ಯಾಚಾರ ನಡೆದಿದ್ದು, ಮೇ 9ರಂದು ಬಾಲಕಿ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಅಗತ್ಯ‌ ವಸ್ತುಗಳನ್ನು ಖರೀದಿಸಲೆಂದು ತಾನು ರೆಸಾರ್ಟ್ ಹೊರಗೆ ಹೋದಾಗ ರೆಸಾರ್ಟ್ ನ ಈಜುಕೊಳದಲ್ಲಿ ತಮ್ಮ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಅಲ್ಲದೇ ಹೋಟೆಲ್ ರೂಮ್ ನಲ್ಲಿಯೂ ಕೊಠಡಿ ಸಹಾಯಕ ತನ್ನ ಮಗಳ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ದೂರು ದಾಖಲಿಸಿದ್ದರು.

ಕೃತ್ಯದ ಬಳಿಕ ಆರೋಪಿ ನಾಪತ್ತೆಯಾಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಗೋವಾ ಪೊಲೀಸರು ಇದೀಗ ಆರೋಪಿಯನ್ನು ಗದಗದಲ್ಲಿ ಬಂಧಿಸಿದ್ದಾರೆ. ಗೋವಾ ಮಕ್ಕಳ ಕಾಯ್ದೆಯ 8ನೇ ವಿಧಿ ಹಾಗೂ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...