alex Certify BIG BREAKING: PSI ನೇಮಕಾತಿಗೆ ಶಾಸಕರು ಲಂಚ ಪಡೆದ ಆರೋಪ; ವಿಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: PSI ನೇಮಕಾತಿಗೆ ಶಾಸಕರು ಲಂಚ ಪಡೆದ ಆರೋಪ; ವಿಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್

ಬೆಂಗಳೂರು: ಪಿಎಸ್ಐ ನೇಮಕಾತಿ ಹುದ್ದೆಗಾಗಿ ಕನಕಗಿರಿ ಬಿಜೆಪಿ ಶಾಸಕ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಕಾಂಗ್ರೆಸ್ ಶಾಸಕರು ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕ ಪ್ರಿಯಾಂಕ್ ಖರ್ಗೆ, ಶಿವರಾಜ್ ತಂಗಡಗಿ, ಪಿಎಸ್ಐ ನೇಮಕಾತಿಗಾಗಿ ಶಾಸಕ ಬಸವರಾಜ್ ದಡೆಸೂಗುರು ಅಭ್ಯರ್ಥಿಯ ತಂದೆಯಿಂದ 15 ಲಕ್ಷ ಹಣ ಪಡೆದಿರುವ ಬಗ್ಗೆ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಸೆ.5ರಂದು ಶಾಸಕ ದಡೇಸೂಗುರು ಹಾಗೂ ಪಿಎಸ್ಐ ಅಭ್ಯರ್ಥಿಯ ತಂದೆ ಪರಸಪ್ಪ ಅವರ ಆಡಿಯೋ ವೈರಲ್ ಆಗಿತ್ತು. ಬಳಿಕ ಸೆ.6ರಂದು ಶಾಸಕರು ವೈರಲ್ ಆದ ಆಡಿಯೋ ನನ್ನದೇ ಎಂದು ಸ್ಪಷ್ಟೀಕರಣ ನೀಡಿದ್ದರು. ಘಟನೆ ನಡೆದು 1 ವಾರವಾದ್ರೂ ಸರ್ಕಾರ ಇನ್ನೂ ಶಾಸಕರ ವಿರುದ್ಧ ಕ್ರಮ ಕೈಗೊಂಡಿಲ್ಲ. ಬಳಿಕ ಮಾತನಾಡಿದ್ದ ಶಾಸಕರೇ ನಾನವನಲ್ಲ ಎಂದು ಹೇಳಿದ್ದರು. ಈಗ ಶಾಸಕರು ಹಣ ಪಡೆದ ಬಗ್ಗೆ ವಿಡಿಯೋ ಬಿಡುಗಡೆ ಮಾಡಲಾಗಿದೆ. ಶಾಸಕರ ಭವನದಲ್ಲಿಯೇ ಕುಳಿತು ಪರಸಪ್ಪ ಅವರಿಂದ ಶಾಸಕರು ಹಣ ಪಡೆದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...