alex Certify BIG BREAKING : ಜಾತಿ ನಿಂದನೆ ಆರೋಪ : ನಟ ಉಪೇಂದ್ರ ವಿರುದ್ಧ ದಾಖಲಾಗಿದ್ದ 2 ನೇ `FIR’ ಗೂ ಹೈಕೋರ್ಟ್ ತಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING : ಜಾತಿ ನಿಂದನೆ ಆರೋಪ : ನಟ ಉಪೇಂದ್ರ ವಿರುದ್ಧ ದಾಖಲಾಗಿದ್ದ 2 ನೇ `FIR’ ಗೂ ಹೈಕೋರ್ಟ್ ತಡೆ

ಬೆಂಗಳೂರು : ಜಾತಿ ನಿಂದನೆ ಆರೋಪ ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿದ್ದ ಎರಡನೇ ಎಫ್ ಐಆರ್ ರದ್ದು ಮಾಡುವಂತೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ನಟ ಉಪೇಂದ್ರಗೆ ಹೈಕೋರ್ಟ್ ರಿಲೀಫ್ ನೀಡಿದೆ.

ಜಾತಿ ನಿಂದನೆ ಆರೋಪದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಹಲಸೂರು ಪೊಲೀಸ್ ಠಾಣೆಯಲ್ಲಿ  ದಾಖಲಾಗಿದ್ದ 2ನೇ ಎಫ್ ಐಆರ್ ರದ್ದುಮಾಡಬೇಕೆಂದು ನಟ ಉಪೇಂದ್ರ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನಟ ಉಪೇಂದ್ರ ವಿರುದ್ಧದ ಎಫ್ ಐಆರ್ ಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಇಂದು ಉಪೇಂದ್ರ ಪರ ವಾದ ಮಂಡಿಸಿದ ವಕೀಲರು, ಒಂದೇ ಆರೋಪಕ್ಕೆ ಎರಡೆರಡು ಎಫ್ ಐಆರ್ ದಾಖಲಿಸುವಂತಿಲ್ಲ. ಸಚಿವರೊಬ್ಬರು ಇದೇ ಆರೋಪ ಮಾಡಿದ್ದರೂ ದೂರು ದಾಖಲಾಗಿಲ್ಲ. ಉಪೇಂದ್ರ ನಟ ಎನ್ನುವ ಕಾರಣಕ್ಕೆ ಎಫ್ ಐಆರ್ ದಾಖಲಿಸಲಾಗಿದೆ ಎಂದು ವಾದ ಮಂಡಿಸಿದ್ದಾರೆ.

ವಾದ ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ನ್ಯಾಯಮೂರ್ತಿ ಚಂದನ್ ಗೌಡರ್ ನಟ ಉಪೇಂದ್ರ ವಿರುದ್ಧ ದಾಖಲಾಗಿದ್ದ ಮತ್ತೊಂದು ಎಫ್ ಐಆರ್ ಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...