ಬೆಂಗಳೂರು: ರಾಜಕಾರಣಿಗಳ ಟೀಕೆ-ಟಿಪ್ಪಣಿ ಪದ ಬಳಕೆಗಳು ನಾಯಕರ ನಿಯಂತ್ರಣ ತಪ್ಪಿದ್ದು, ವಿವಾದಗಳಿಗೆ ಕಾರಣವಾಗುತ್ತಿವೆ. ‘ಹಮಾರಾ ಕುತ್ತಾ ಹಮಾರಾ ಗಲ್ಲಿ ಮೇ ಶೇರ್’ ಎಂದು ಹೇಳುವ ಮೂಲಕ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೊಸ ವಿವಾದ ಸೃಷ್ಟಿಸಿದ್ದಾರೆ.
ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ‘ಕುತ್ತಾ’ ಎಂದು ಕರೆಯುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಿಎಂ ಬಿಎಸ್ ಯಡಿಯೂರಪ್ಪನವರು ಪ್ರಧಾನಿ ನರೇಂದ್ರ ಮೋದಿ ಮುಂದೆ ಯಾವುದೇ ಮಾತನ್ನೂ ಆಡಲ್ಲ, ಅವರ ಮುಂದೆ ಉಸಿರೂ ಎತ್ತಲ್ಲ. ರಾಜ್ಯದಲ್ಲಿ ಮಾತ್ರ ಇವರ ಸ್ಥಿತಿ ಹೇಗಿದೆ ಎಂದರೆ ಹಮಾರಾ ಕುತ್ತಾ ಹಮಾರಾ ಗಲ್ಲಿ ಮೇ ಶೇರ್ ಎಂಬಂತಾಗಿದೆ ಎಂದು ವಾಗ್ದಾಳಿ ನಡೆಸಿದರು.
BIG NEWS: ಸಚಿವ ಸಿ.ಪಿ. ಯೋಗೇಶ್ವರ್ ಗೆ ಬಿ.ಸಿ. ಪಾಟೀಲ್ ಟಾಂಗ್; ಡಿಕೆಶಿ ಕನಸೂ ನನಸಾಗಲ್ಲ ಎಂದು ವಾಗ್ದಾಳಿ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಳಿ ಕುಳಿತು ರಾಜ್ಯಕ್ಕೆ ಬರಬೇಕಿರುವ ಅನುದಾನವನ್ನು ಬಿಡುಗಡೆ ಮಾಡುವಂತೆ ಕೇಳಬೇಕು. ಆದರೆ ಸಿಎಂ, ಸಂಸದರಿಂದ ಹಿಡಿದು ಯಾರೊಬ್ಬರಿಗೂ ಧೈರ್ಯವೇ ಇಲ್ಲ ಇವರೆಲ್ಲ ಕೇಂದ್ರದ ಮುಂದೆ ಮೂಕರಾಗಿದ್ದಾರಾ ಎಂದು ಪ್ರಶ್ನಿಸಿದರು.