ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ಮುಕ್ತಾಯವಾಗಿದ್ದು, ತನಿಖಾ ವರದಿ ಸಿದ್ಧವಿದೆ ಎಂದು ಎಸ್ಐಟಿ ಹೈಕೋರ್ಟ್ ಗೆ ಮೆಮೋ ಸಲ್ಲಿಕೆ ಮಾಡಿದೆ.
ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳ ವಿಚಾರಣೆ ನಡೆಸಲಾಗಿದ್ದು, ತನಿಖೆಯ ಅಂತಿಮ ವರದಿ ಸಿದ್ಧವಿದೆ ಎಂದು ಎ.ಜಿ. ಪ್ರಭುಲಿಂಗ ಹೈಕೋರ್ಟ್ ಗೆ ಮೆಮೋ ಸಲ್ಲಿಸಿದ್ದಾರೆ.
ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ ಪ್ರಸಿದ್ಧ ಮಾರುಕಟ್ಟೆ ‘ಬಂದ್’
ಮೆಮೋ ಪರಿಶೀಲಿಸಿದ ನ್ಯಾಯಾಲಯ, ಜುಲೈ 14ರೊಳಗೆ ತನಿಖಾ ವರದಿಯ ಇಂಗ್ಲೀಷ್ ಅನುವಾದವನ್ನು ಕೋರ್ಟ್ ಗೆ ಸಲ್ಲಿಸುವಂತೆ ಸೂಚಿಸಿ, ವಿಚಾರಣೆ ಜುಲೈ 14ಕ್ಕೆ ಮುಂದೂಡಿದೆ.