alex Certify BIG BREAKING: ಪ್ಯಾರಾಲಿಂಪಿಕ್​ ಕ್ರೀಡಾಕೂಟದಿಂದ ರಷ್ಯಾ – ಬೆಲಾರಸ್​ನ ಅಥ್ಲೀಟ್​ಗಳು ಹೊರಕ್ಕೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಪ್ಯಾರಾಲಿಂಪಿಕ್​ ಕ್ರೀಡಾಕೂಟದಿಂದ ರಷ್ಯಾ – ಬೆಲಾರಸ್​ನ ಅಥ್ಲೀಟ್​ಗಳು ಹೊರಕ್ಕೆ….!

ವಿಶೇಷ ಸಭೆಯನ್ನು ಕರೆದಿದ್ದ ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್​​ ಸಮಿತಿಯ ಆಡಳಿತ ಮಂಡಳಿಯು 2022ರ ಬೀಜಿಂಗ್​​ ಪ್ಯಾರಾಲಿಂಪಿಕ್​ ಕ್ರೀಡಾಕೂಟದಿಂದ ರಷ್ಯಾ ಹಾಗೂ ಬೆಲಾರಸ್​ನ ಅಥ್ಲೀಟ್​ಗಳಿಗೆ ಕೊಕ್​ ನೀಡಿದೆ. ಅಂದರೆ ಈ ಎರಡು ದೇಶಗಳ ಪ್ಯಾರಾ ಅಥ್ಲೀಟ್​ಗಳಿಗೆ ನಾಳೆಯಿಂದ ಆರಂಭಗೊಳ್ಳಲಿರುವ ಯಾವುದೇ ಗೇಮ್ಸ್​ಗಳಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.

ಇನ್ನು ಈ ವಿಚಾರವಾಗಿ ಮಾತನಾಡಿದ ಐಪಿಸಿ ಅಧ್ಯಕ್ಷ ಆಂಡ್ರ್ಯೂ ಪಾರ್ಸನ್ಸ್​ , ಕ್ರೀಡೆಯಲ್ಲಿ ರಾಜಕೀಯವನ್ನು ಮಿಶ್ರಣ ಮಾಡಬಾರದು ಎಂದು ನಾವು ನಂಬಿದ್ದೇವೆ. ಇಲ್ಲಿ ಯಾರದ್ದೂ ತಪ್ಪಿಲ್ಲವಾದರೂ ಸಹ ಯುದ್ಧವು ಈಗ ಕ್ರೀಡಾಕೂಟಕ್ಕೂ ಬಂದಿದೆ. ಹೀಗಾಗಿ ನಾವು ನಮ್ಮ ಸದಸ್ಯರ ಅಭಿಪ್ರಾಯಗಳನ್ನು ಸ್ವೀಕರಿಸಿದ್ದೇವೆ ಎಂದು ಹೇಳಿದರು.

ಪ್ಯಾರಾಲಿಂಪಿಕ್​ ಕ್ರೀಡಾಕೂಟಕ್ಕೆ ಯಾವುದೇ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದಲೇ ನಾವು ಈ ನಿರ್ಧಾರವನ್ನು ಕೈಗೊಂಡಿದ್ದೇವೆ. ಪ್ಯಾರಾಲಿಂಪಿಕ್​ ತತ್ವಗಳು ಹಾಗೂ ಮೌಲ್ಯಗಳ ಆಧಾರದ ಮೇಲೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ರಷ್ಯಾ ಹಾಗೂ ಉಕ್ರೇನ್​ ನಡುವಿನ ಯುದ್ಧವು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲೇ ರಷ್ಯಾದ ಗ್ರ್ಯಾಂಡ್ ಪ್ರಿಕ್ಸ್ ಸೇರಿದಂತೆ ಅನೇಕ ಕ್ರೀಡಾಕೂಟಗಳು ರದ್ದಾಗಿವೆ. ಚಾಂಪಿಯನ್ಸ್​ ಲೀಗ್​ ಫೈನಲ್​​ನ್ನೂ ರಷ್ಯಾದಿಂದ ಪ್ಯಾರಿಸ್​ಗೆ ಸ್ಥಳಾಂತರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...