ಬೆಂಗಳೂರು: ನೂತನ ಸಿಎಂ ಆಯ್ಕೆ ನಿಟ್ಟಿನಲ್ಲಿ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ವೇಗ ಗಮನಿಸಿದರೆ ನಾಳೆ ಸಂಜೆಯೇ ನೂತನ ಸಿಎಂ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಈಗಾಗಲೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದು, ಇಂದು ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸಭೆಯಲ್ಲಿ ಔಪಚಾರಿಕವಾಗಿ ಶಾಸಕರ ಒಪ್ಪಿಗೆ ಪಡೆದು ನೂತನ ಸಿಎಂ ಹೆಸರನ್ನು ಅಂತಿಮಗೊಳಿಸಲಿದ್ದಾರೆ. ಬಳಿಕ ವೀಕ್ಷಕರು ವರಿಷ್ಠರಿಗೆ ಮಾಹಿತಿ ರವಾನಿಸಲಿದ್ದಾರೆ.
ಪೋಸ್ ಕೊಟ್ಟು ವಿಡಿಯೋ ಪೋಸ್ಟ್ ಮಾಡಿದ ಪಾಕ್ ಸಚಿವನಿಗೆ ಟ್ರೋಲ್ ಸುರಿಮಳೆ
ನಾಳೆ ಬೆಳಿಗ್ಗೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಹೆಸರನ್ನು ಘೋಷಿಸಲಿದ್ದು, ಬಳಿಕ ಮಧ್ಯಾಹ್ನದ ವೇಳೆ ನಿಯೋಜಿತ ಸಿಎಂ ರಾಜಭವನಕ್ಕೆ ತೆರಳಿ, ಸಂಜೆಯೇ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಬಳಿಕ ಒಂದು ವಾರದಲ್ಲಿ ಸಚಿವ ಸಂಪುಟ ರಚನೆಯಾಗಲಿದೆ ಎಂದು ಹೇಳಲಾಗುತ್ತಿದೆ.