ನವದೆಹಲಿ: ದೇಶದಲ್ಲಿ ಕೊರೊನಾ ರೂಪಾಂತರಿ ವೈರಸ್ ಒಮಿಕ್ರಾನ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಭಾರತದಲ್ಲಿ ಈವರೆಗೆ 236 ಜನರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಒಮಿಕ್ರಾನ್ ಸೋಂಕಿತ 236 ಜನರ ಪೈಕಿ 104 ಜನರು ಗುಣಮುಖರಾಗಿದ್ದಾರೆ. ದೇಶದಲ್ಲಿ ಒಮಿಕ್ರಾನ್ ಕೇಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಿರುವ ಮುಂಜಾಗೃತಾ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆಯೊಂದಿಗೆ ಪ್ರಧಾನಿ ಮೋದಿ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದೆ.
‘ಮೇರಾ ಯಾರ್’ಗೆ ಆಕರ್ಷಕವಾಗಿ ಕುಣಿದ ಬಾಲಕಿ…!
ಮಹಾರಾಷ್ಟ್ರ-65, ದೆಹಲಿ-64, ತೆಲಂಗಾಣ-24, ರಾಜಸ್ಥಾನ -21, ಕರ್ನಾಟಕ-19, ಕೇರಳ-15, ಗುಜರಾತ್ -14, ಜಮ್ಮು-ಕಾಶ್ಮೀರ -3 ಆಂಧ್ರಪ್ರದೇಶ, ಓಡಿಶಾ ಹಾಗೂ ಉತ್ತರ ಪ್ರದೇಶಗಳಲ್ಲಿ ತಲಾ 2, ಚಂಡಿಗಢ, ಲಡಾಖ್, ತಮಿಳುನಾಡು, ಉತ್ತರಾಖಂಡ್, ಪಶ್ಚಿಮ ಬಂಗಾಳಗಳಲ್ಲಿ ತಲಾ 1 ಕೇಸ್ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದೆ.