alex Certify BIG BREAKING: ಡಿ.ಕೆ.ಶಿವಕುಮಾರ್ ವಿರುದ್ಧ ಸ್ಫೋಟಕ ಆಡಿಯೋ ಬಿಡುಗಡೆ ಮಾಡಿದ ರಮೇಶ್ ಜಾರಕಿಹೊಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಡಿ.ಕೆ.ಶಿವಕುಮಾರ್ ವಿರುದ್ಧ ಸ್ಫೋಟಕ ಆಡಿಯೋ ಬಿಡುಗಡೆ ಮಾಡಿದ ರಮೇಶ್ ಜಾರಕಿಹೊಳಿ

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಗಂಭೀರ ಅರೋಪಗಳನ್ನು ಮಾಡಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಡಿಕೆಶಿ ಅವರ 20 ಸಿಡಿಗಳಿವೆ, ಆಡಿಯೋ ಇದೆ ಆದರೆ ಯಾವುದನ್ನೂ ಈಗ ಬಿಡುಗಡೆ ಮಾಡಲ್ಲ, ಸಿಬಿಐಗೆ ಕೊಡುತ್ತೇನೆ ಎಂದು ಹೇಳಿದ ಕೆಲ ಸಮಯದಲ್ಲೇ ಸ್ಫೋಟಕ ಆಡಿಯೋ ಬಿಡುಗಡೆ ಮಾಡಿದ್ದಾರೆ.

ಡಿ.ಕೆ.ಶಿವಕುಮಾರ್ ಅವರ ಅಕ್ರಮ ಸಂಪತ್ತಿಗೆ ಸಾಕ್ಷ್ಯ ಎನ್ನಲಾಗಿರುವ ಆಡಿಯೋವನ್ನು ರಮೇಶ್ ಜಾರಕಿಹೊಳಿ ಬಿಡುಗಡೆ ಮಾಡಿದ್ದಾರೆ. ಆಡಿಯೋದಲ್ಲಿ ಸ್ವತಃ ಡಿ.ಕೆ. ಶಿವಕುಮಾರ್ ಅವರೇ ಮಾತನಾಡಿದ್ದಾರೆ ಎನ್ನಲಾದ 19 ಸೆಕೆಂಡ್ ಗಳ ಸಂಭಾಷಣೆಯಿದೆ.

ನನಗೆ ದುಬೈನಲ್ಲಿ ಒಂದು ಮನೆಯಿದೆ, ಲಂಡನ್, ಮುಂಬೈ ನಲ್ಲಿಯೂ ಮನೆಯಿದೆ. ನಮ್ಮ ಮನೆಯ ಮೇಲೆ ದಾಳಿಯಾದಾಗ ಹಣ ಸೀಜ್ ಆಯ್ತು. ನಮ್ಮ ಮನೆಯಲ್ಲಿ 45 ಕೋಟಿ ರೂಪಾಯಿ ಸೀಜ್ ಆಯ್ತು ಎಂದು ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದಾರೆ ಎನ್ನಲಾದ ಆಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

ಒಟ್ಟಾರೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಹೊಸ ರಾಜಕೀಯ ಕದನ ಆರಂಭವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...