alex Certify BIG BREAKING: ಕೊರೋನ ನಿಯಂತ್ರಿಸಲು ದೀದಿ ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ, ಅರ್ಧ ಲಾಕ್ ಆದ ಪಶ್ಚಿಮ‌ ಬಂಗಾಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಕೊರೋನ ನಿಯಂತ್ರಿಸಲು ದೀದಿ ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ, ಅರ್ಧ ಲಾಕ್ ಆದ ಪಶ್ಚಿಮ‌ ಬಂಗಾಳ

ಕೊರೋನ ವೈರಸ್ ಪ್ರಕರಣಗಳು ಹೆಚ್ಚಳವಾಗ್ತಿದ್ದಂತೆ ಪಶ್ಚಿಮ ಬಂಗಾಳದ ಸರ್ಕಾರ ಭಾನುವಾರ ಕಟ್ಟುನಿಟ್ಟಾದ ಲಾಕ್‌ಡೌನ್ ತರಹದ ಕ್ರಮಗಳನ್ನು ಪರಿಚಯಿಸಿದೆ.

ನಾಳೆಯಿಂದ ಜಾರಿಯಾಗುವ ಹೊಸ ಮಾರ್ಗಸೂಚಿಯ ಪ್ರಕಾರ, ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಜನರು ಮತ್ತು ವಾಹನಗಳ ಸಂಚಾರ ಮತ್ತು ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಗಿದೆ. ಅಗತ್ಯ ಮತ್ತು ತುರ್ತು ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಸೋಮವಾರದಿಂದಲೆ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನ ಬಂದ್ ಮಾಡಲಾಗುತ್ತದೆ.

ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಹಾಜರಾತಿಯನ್ನು ಶೇಕಡಾ 50 ಕ್ಕೆ ಮಿತಿಗೊಳಿಸಿ, ಎಲ್ಲಾ ಆಡಳಿತಾತ್ಮಕ ಸಭೆಗಳನ್ನು ವರ್ಚುವಲ್ ಮೋಡ್ ಮೂಲಕ ನಡೆಸಲಾಗುವುದು ಎಂದು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಎಚ್‌ಕೆ ದ್ವಿವೇದಿ ಹೇಳಿದ್ದಾರೆ.

ಈಜುಕೊಳಗಳು, ಸ್ಪಾಗಳು, ಜಿಮ್‌ಗಳು ಮತ್ತು ಸಲೂನ್‌ಗಳು ನಾಳೆ, ಜನವರಿ 3 ರಿಂದ ಮುಂದಿನ ಸೂಚನೆಯವರೆಗೆ ಮುಚ್ಚಲ್ಪಡುತ್ತವೆ. ನಾಳೆಯಿಂದ ಮೃಗಾಲಯಗಳು ಮತ್ತು ಪ್ರವಾಸಿ ಸ್ಥಳಗಳನ್ನು ಸಾರ್ವಜನಿಕರಿಗೆ ಮುಚ್ಚಲಾಗುವುದು. ಚಿತ್ರಮಂದಿರಗಳಲ್ಲಿ ಆಸನಗಳನ್ನು ಶೇ.50ಕ್ಕೆ ಕಡಿತಗೊಳಿಸಲಾಗಿದೆ.

ಎಲ್ಲಾ ಶಾಪಿಂಗ್ ಮಾಲ್‌ಗಳು, ಮಾರುಕಟ್ಟೆಗಳು ಮತ್ತು ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳು ಶೇಕಡಾ 50 ರಷ್ಟು ಸಾಮರ್ಥ್ಯದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತವೆ ಮತ್ತು ರಾತ್ರಿ 10 ರೊಳಗೆ ಬಂದ್ ಆಗುತ್ತವೆ.‌

ಎಲ್ಲಾ ಮಾರುಕಟ್ಟೆಗಳನ್ನು ಸ್ಯಾನಿಟೈಸ್ ಮಾಡಿ, ಸ್ವಚ್ಛ ಮಾಡಿ ಎಂದು ಸರ್ಕಾರ ಮನವಿ ಮಾಡಿದೆ. ಕೋವಿಡ್ ನಿಯಮ ಅನುಸರಿಸಿ ಮನೆಗಳಿಗೆ ಆಹಾರ ಹಾಗೂ ಅಗತ್ಯ ವಸ್ತುಗಳ ವಿತರಣೆಗೆ ಅನುಮತಿ‌ ನೀಡಲಾಗಿದೆ. ಸಾರ್ವಜನಿಕವಾಗಿ ಎಲ್ಲಾ ಸಮಯದಲ್ಲೂ ಮಾಸ್ಕ್ ಧರಿಸುವುದು, ದೈಹಿಕ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಆರೋಗ್ಯ ಮತ್ತು ನೈರ್ಮಲ್ಯ ನಿಯಮಗಳಿಗೆ ಸಾರ್ವಜನಿಕರು ಬದ್ಧವಾಗಿರಬೇಕೆಂದು ಸರ್ಕಾರ ಒತ್ತಿಹೇಳಿದೆ.

ಕೋವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸುವ ಜವಾಬ್ದಾರಿಯು ಕೈಗಾರಿಕೆಗಳ ಮೇಲೆ ಇರುತ್ತದೆ ಎಂದು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಎಚ್‌ಕೆ ದ್ವಿವೇದಿ ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ಪಶ್ಚಿಮ ಬಂಗಾಳದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿವೆ. ಶನಿವಾರ, 4,512 ಪ್ರಕರಣಗಳು ವರದಿ ಆಗಿದ್ದು, ಒಂದೇ ದಿನದಲ್ಲಿ ಸಾವಿರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಕೋಲ್ಕತ್ತಾ ಒಂದರಲ್ಲೆ 2,398 ಹೊಸ ಪ್ರಕರಣಗಳು ದಾಖಲಾಗಿದ್ದು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...