alex Certify BIG ALERT : ಅಪರಿಚಿತ ಲಿಂಕ್ ಕ್ಲಿಕ್ ಮಾಡುವ ಮುನ್ನ ಈ ಸುದ್ದಿ ಓದಿ : 8 ಲಕ್ಷ ಹಣ ಕಳೆದುಕೊಂಡ ಬೆಂಗಳೂರಿನ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG ALERT : ಅಪರಿಚಿತ ಲಿಂಕ್ ಕ್ಲಿಕ್ ಮಾಡುವ ಮುನ್ನ ಈ ಸುದ್ದಿ ಓದಿ : 8 ಲಕ್ಷ ಹಣ ಕಳೆದುಕೊಂಡ ಬೆಂಗಳೂರಿನ ಮಹಿಳೆ

ಅಪರಿಚಿತ ಲಿಂಕ್ ಕ್ಲಿಕ್ ಮಾಡುವ ಮುನ್ನ ಈ ಸುದ್ದಿ ಓದಿ..ಬೆಂಗಳೂರಿನ ಮಹಿಳೆಯೊಬ್ಬರು ಬರೋಬ್ಬರಿ 8 ಲಕ್ಷ ಹಣ ಕಳೆದುಕೊಂಡಿದ್ದಾರೆ.

ಹೌದು, ಉದ್ಯೋಗದ ಹೆಸರಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿದ ಮಹಿಳೆ ಲೀನಾ ಎಂಬುವವರು 8.35 ಲಕ್ಷ ಹಣ ಕಳೆದುಕೊಂಡಿದ್ದಾರೆ.

ಲೀನಾಗೆ ಅಪರಿಚಿತ ಸಂಖ್ಯೆಯಿಂದ ಮೆಸೇಜ್ ಬಂದಿದ್ದು, ಲಿಂಕ್ ಕ್ಲಿಕ್ ಮಾಡಲು ಸೂಚನೆ ನೀಡಲಾಗಿದೆ. ಮೊದಲು ಆಕೆಯನ್ನು ನಂಬಿಸಲು 200 ರೂ ಹಣ ಕಳಿಹಿಸಿರುವುದಾಗಿ ಆರೋಪಿ ಹೇಳಿದ್ದಾನೆ. ನಂತರ ಲೀನಾಗೆ ಟೆಲಿಗ್ರಾಮ್ ಐಡಿಯನ್ನು ನೀಡಿ ಇದರಲ್ಲಿ ಹಣ ಹೂಡಿಕೆ ಮಾಡಿದ್ರೆ ಉತ್ತಮ ಆದಾಯ ಬರುತ್ತದೆ ಎಂದು ವಂಚಿಸಿದ್ದಾನೆ. ಇದನ್ನು ನಂಬಿದ ಲೀನಾ ಬ್ಯಾಂಕ್ ಖಾತೆಗೆ ಬರೋಬ್ಬರಿ 8.35 ಲಕ್ಷ ಹಣ ವರ್ಗಾಯಿಸಿದ್ದಾರೆ. ಹಣ ಬರುತ್ತಿದ್ದಂತೆ ಆತ ಸಂಪರ್ಕ ಕಳೆದುಕೊಂಡಿದ್ದು, ಮಹಿಳೆಗೆ ತಾನು ಮೋಸ ಹೋದೆ ಎಂಬುದು ಗೊತ್ತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...