alex Certify BIG‌ BREAKING: ವಿರೋಧ ವ್ಯಕ್ತವಾಗುತ್ತಿದ್ದಂತೆ ಗರ್ಭಿಣಿ ಅಭ್ಯರ್ಥಿ ನೇಮಕಾತಿ ಕುರಿತ ವಿವಾದಾತ್ಮಕ ಆದೇಶ ಹಿಂಪಡೆದ SBI | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG‌ BREAKING: ವಿರೋಧ ವ್ಯಕ್ತವಾಗುತ್ತಿದ್ದಂತೆ ಗರ್ಭಿಣಿ ಅಭ್ಯರ್ಥಿ ನೇಮಕಾತಿ ಕುರಿತ ವಿವಾದಾತ್ಮಕ ಆದೇಶ ಹಿಂಪಡೆದ SBI

ವಿವಿಧ ವಲಯಗಳಿಂದ ತೀವ್ರ ಟೀಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಭಾರತದ ಪ್ರತಿಷ್ಠಿತ ಬ್ಯಾಂಕ್ ಎಸ್​ಬಿಐ ಮಹಿಳಾ ಸಿಬ್ಬಂದಿ ನೇಮಕಾತಿ ವಿಚಾರದಲ್ಲಿ ಹೊರಡಿಸಿದ್ದ ವಿವಾದಾತ್ಮಕ ಮಾರ್ಗಸೂಚಿಯನ್ನು ಹಿಂಪಡೆದಿದೆ.

ಬ್ಯಾಂಕ್​ ನೇಮಕಾತಿಗೆ ಸಿಬ್ಬಂದಿಯ ಸಾಮರ್ಥ್ಯದ ವಿಚಾರವಾಗಿ ಕೆಲ ದಿನಗಳ ಹಿಂದಷ್ಟೇ ಮಾರ್ಗಸೂಚಿಯನ್ನು ಹೊರಡಿಸಿತ್ತು. ಇದರಲ್ಲಿ ಮಹಿಳೆಯರು ಹಾಗೂ ಗರ್ಭಿಣಿಯರು ಸೇವೆಗೆ ಸೇರುವ ಬಗ್ಗೆ ಕೆಲವು ವಿವಾದಾತ್ಮಕ ನಿಬಂಧನೆಗಳನ್ನು ನೀಡಲಾಗಿತ್ತು. ಹೊಸ ನಿಯಮದ ಪ್ರಕಾರ ಮೂರು ತಿಂಗಳು ಮೇಲ್ಪಟ್ಟ ಮಹಿಳಾ ಅಭ್ಯರ್ಥಿಯನ್ನು ಸೇವೆಗೆ ಸೇರ್ಪಡೆ ಮಾಡಲು ಅವರು ತಾತ್ಕಾಲಿಕವಾಗಿ ಅಸಮರ್ಥರು ಹೀಗಾಗಿ ಅವರು ಹೆರಿಗೆಯಾದ ನಾಲ್ಕು ತಿಂಗಳ ಬಳಿಕ ಸೇವೆಗೆ ಹಾಜರಾಗಲು ಅನುಮತಿ ನೀಡಲಾಗಿತ್ತು.

ಆದರೆ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಈ ನಿಯಮವು ಕಾರ್ಮಿಕ ವಲಯ ಹಾಗೂ ದೆಹಲಿ ಮಹಿಳಾ ಆಯೋಗದಿಂದ ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿರಿಸಿದ ಎಸ್​ಬಿಐ ಇದೀಗ ಗರ್ಭಿಣಿ ಅಭ್ಯರ್ಥಿಗಳ ನೇಮಕಾತಿ ಕುರಿತಂತೆ ಹೊರಡಿಸಿದ್ದ ಹೊಸ ಮಾರ್ಗಸೂಚಿಯನ್ನು ಹಿಂಪಡೆದಿದೆ. ಹಾಗೂ ಈಗಾಗಲೇ ಅಸ್ತಿತ್ವದಲ್ಲಿರುವ ಸೂಚನೆಗಳನ್ನೇ ಮುಂದುವರಿಸುವುದಾಗಿ ಎಸ್​ಬಿಐ ನಿರ್ಧರಿಸಿದೆ ಎಂದು ಬ್ಯಾಂಕ್​ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...