alex Certify BREAKING NEWS: ಏಕಾಏಕಿ ಹೊತ್ತಿ ಉರಿದ ಮೊಬೈಲ್ ಅಂಗಡಿ; 200ಕ್ಕೂ ಹೆಚ್ಚು ಮೊಬೈಲ್ ಗಳು ಬೆಂಕಿಗಾಹುತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಏಕಾಏಕಿ ಹೊತ್ತಿ ಉರಿದ ಮೊಬೈಲ್ ಅಂಗಡಿ; 200ಕ್ಕೂ ಹೆಚ್ಚು ಮೊಬೈಲ್ ಗಳು ಬೆಂಕಿಗಾಹುತಿ

ಬೀದರ್: ಮೊಬೈಲ್ ಶಾಪ್ ನಲ್ಲಿ ಬೆಂಕಿ ಅವಘಡ ಸಂಭವಿಸಿ ನೋಡನೋಡುತ್ತಿದ್ದಂತೆ ಇಡೀ ಅಂಗಡಿ ಹೊತ್ತಿ ಉರಿದ ಘಟನೆ ಬೀದರ್ ಜಿಲ್ಲೆಯ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ.

ಲೈಕ್ ಪಾಶಾ ಎಂಬುವವರಿಗೆ ಸೇರಿದ ಮೊಬೈಲ್ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ಕೆಲ ಸಮಯದಲ್ಲೇ ಇಡೀ ಅಂಗಡಿ ಬೆಂಕಿಗಾಹುತಿಯಾಗಿದೆ.

ಅಂಗಡಿಯಲ್ಲಿದ್ದ 200ಕ್ಕೂ ಹೆಚ್ಚು ಮೊಬೈಲ್ ಗಳು, ಪೀಠೋಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...