alex Certify BIG NEWS: ನಷ್ಟದ ಕಾರಣಕ್ಕೆ ಬೀದರ್ – ಬೆಂಗಳೂರು ನಡುವಿನ ವಿಮಾನ ಸೇವೆ ಸ್ಥಗಿತಗೊಳಿಸಿದ ‘ಸ್ಟಾರ್ ಏರ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಷ್ಟದ ಕಾರಣಕ್ಕೆ ಬೀದರ್ – ಬೆಂಗಳೂರು ನಡುವಿನ ವಿಮಾನ ಸೇವೆ ಸ್ಥಗಿತಗೊಳಿಸಿದ ‘ಸ್ಟಾರ್ ಏರ್’

ಬೀದರ್ – ಬೆಂಗಳೂರು ನಡುವೆ ಸಂಚರಿಸುವ ವಿಮಾನ ಪ್ರಯಾಣಿಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ನಷ್ಟದ ಕಾರಣಕ್ಕೆ ‘ಸ್ಟಾರ್ ಏರ್’ ತನ್ನ ವಿಮಾನ ಸೇವೆಯನ್ನು ಮಂಗಳವಾರದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಿದೆ.

ಈ ಕುರಿತಂತೆ ‘ಸ್ಟಾರ್ ಏರ್’ ಕಂಪನಿಯ ಅಧಿಕಾರಿಗಳು ಮಾಹಿತಿ ನೀಡಿದ್ದು, ಈ ವಿಮಾನಯಾನ ಸೇವೆಯು ನಷ್ಟದಲ್ಲಿ ನಡೆಯುತ್ತಿದ್ದ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈವರೆಗೆ ಬೀದರ್ – ಬೆಂಗಳೂರು, ಬೆಂಗಳೂರು – ಬೀದರ್ ನಡುವೆ ‘ಸ್ಟಾರ್ ಏರ್’ ನಿತ್ಯ ಒಂದು ಸಲ ತನ್ನ ವಿಮಾನ ಹಾರಾಟ ನಡೆಸುತ್ತಿದ್ದು, ನಷ್ಟದ ಹಿನ್ನೆಲೆಯಲ್ಲಿ ಈಗ ಒಪ್ಪಂದದ ಅವಧಿಗೂ ಮುನ್ನವೇ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...