
ಬೀದರ್ – ಬೆಂಗಳೂರು ನಡುವೆ ಸಂಚರಿಸುವ ವಿಮಾನ ಪ್ರಯಾಣಿಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ನಷ್ಟದ ಕಾರಣಕ್ಕೆ ‘ಸ್ಟಾರ್ ಏರ್’ ತನ್ನ ವಿಮಾನ ಸೇವೆಯನ್ನು ಮಂಗಳವಾರದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಿದೆ.
ಈ ಕುರಿತಂತೆ ‘ಸ್ಟಾರ್ ಏರ್’ ಕಂಪನಿಯ ಅಧಿಕಾರಿಗಳು ಮಾಹಿತಿ ನೀಡಿದ್ದು, ಈ ವಿಮಾನಯಾನ ಸೇವೆಯು ನಷ್ಟದಲ್ಲಿ ನಡೆಯುತ್ತಿದ್ದ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈವರೆಗೆ ಬೀದರ್ – ಬೆಂಗಳೂರು, ಬೆಂಗಳೂರು – ಬೀದರ್ ನಡುವೆ ‘ಸ್ಟಾರ್ ಏರ್’ ನಿತ್ಯ ಒಂದು ಸಲ ತನ್ನ ವಿಮಾನ ಹಾರಾಟ ನಡೆಸುತ್ತಿದ್ದು, ನಷ್ಟದ ಹಿನ್ನೆಲೆಯಲ್ಲಿ ಈಗ ಒಪ್ಪಂದದ ಅವಧಿಗೂ ಮುನ್ನವೇ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ.