alex Certify ಬಿಸಿ ಬಿಸಿ ನವಣೆ ಪಾಲಕ್ ಪೊಂಗಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಸಿ ಬಿಸಿ ನವಣೆ ಪಾಲಕ್ ಪೊಂಗಲ್

ಮನುಷ್ಯನ ಹೊಟ್ಟೆಯೇ ಆರೋಗ್ಯದ ಗುಟ್ಟು ಎನ್ನುವ ಮಾತಿದೆ. ಈ ನಿಟ್ಟಿನಲ್ಲಿ ಜೀರ್ಣಕ್ರಿಯೆ ಸರಾಗವಾಗಿದ್ದರೆ ಯಾವ ಕಾಯಿಲೆಯೂ ಹತ್ತಿರ ಸುಳಿಯುವುದಿಲ್ಲ. ನಾರಿನಂಶ ಹೇರಳವಾಗಿರುವ ಹಣ್ಣು, ತರಕಾರಿ ಸೇವನೆಯೂ ಪಚನಕ್ರಿಯೆಗೆ ನೆರವಾಗುತ್ತದೆ. ಅದರಂತೆಯೇ ವಾರದಲ್ಲಿ ಒಮ್ಮೆಯಾದರೂ ಸಿರಿಧಾನ್ಯವನ್ನು ಬಳಸುವುದರಿಂದ ದೇಹಕ್ಕೆ ಅಗತ್ಯವಾದ ನಾರಿನಂಶ ಸಿಗುತ್ತದೆ.

ಯಾವುದೇ ಸಿರಿಧಾನ್ಯವನ್ನು ಬಳಸುವ ಮುನ್ನ ಕೆಲವು ಗಂಟೆ ನೆನೆಸಿಟ್ಟು ಆ ನಂತರ ಅಡುಗೆ ಮಾಡುವುದು ಸೂಕ್ತ ವಿಧಾನ. ಇನ್ನೂ ಸಿರಿಧಾನ್ಯಗಳಲ್ಲಿ ನವಣೆ ಮತ್ತು ರಾಗಿ ಹಿಂದಿನಿಂದಲೂ ಬಳಕೆಯಲ್ಲಿದೆ. ನಾವು ಇಂದು ನವಣೆ ಮತ್ತು ಪಾಲಕ್ ಬಳಸಿ ಪೊಂಗಲ್ ಮಾಡುವುದು ಹೇಗೆ ಎನ್ನುವುದನ್ನು ನೋಡೋಣ.

ಮೊದಲಿಗೆ ಒಂದು ಲೋಟ ನವಣೆಯನ್ನು 2-4 ಗಂಟೆಗಳ ನೀರಿನಲ್ಲಿ ನೆನೆಸಿಡಬೇಕು. ಇಲ್ಲವೇ ಹಿಂದಿನ ದಿನ ರಾತ್ರಿಯೂ ನೆನೆಸಿಡಬಹುದು. ಬೆಳಿಗ್ಗೆ ನವಣೆಯನ್ನು ಬಳಸಬಹುದು.

ಕುಕ್ಕರ್​​ಗೆ ನೆನೆಸಿಟ್ಟ ಒಂದು ಲೋಟ ನವಣೆ, ಒಂದು ಲೋಟದಷ್ಟು ಹೆಸರುಬೇಳೆ, ಸಣ್ಣದಾಗಿ ಹೆಚ್ಚಿಟ್ಟುಕೊಂಡ ಒಂದು ಕಟ್ಟು ಪಾಲಕ್ ಸೊಪ್ಪು ಜೊತೆಗೆ ಒಂದು ಸ್ಪೂನ್ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಳ್ಳಬೇಕು. ಇದಕ್ಕೆ 6 ಲೋಟ ನೀರು ಸೇರಿಸಿ 3 ವಿಶಲ್ ಬರಿಸಿಕೊಳ್ಳಬೇಕು.

ನಂತರ ಒಂದು ಬಾಣಲಿಯಲ್ಲಿ ಒಂದು ಸ್ಪೂನ್ ತುಪ್ಪಕ್ಕೆ, ಕರಿಬೇವು, ತುರಿದುಕೊಂಡ ಶುಂಠಿ ಸ್ವಲ್ಪ, ಅರ್ಧ ಚಮಚದಷ್ಟು ಜೀರಿಗೆ, ಕುಟ್ಟಿ ಪುಡಿ ಮಾಡಿದ ಮೆಣಸಿನ ಪುಡಿ, ಒಣ ಮೆಣಸಿನಕಾಯಿ ಸೇರಿಸಿ ಒಗ್ಗರಣೆ ಮಾಡಿಕೊಳ್ಳಬೇಕು.

ಕುಕ್ಕರ್ ಆರಿದ ಬಳಿಕ ತೆಗೆದು ಅದಕ್ಕೆ ಈ ಒಗ್ಗರಣೆ ಮಿಶ್ರಣವನ್ನು ಸೇರಿಸಿ ಮಿಕ್ಸ್ ಮಾಡಿದರೇ ಬಿಸಿ ಬಿಸಿ ನವಣೆ ಪಾಲಕ್ ಪೊಂಗಲ್ ಸವಿಯಲು ಸಿದ್ಧ. ದೇಸಿ ತುಪ್ಪದೊಂದಿಗೆ ಈ ಪೊಂಗಲ್ ಸೇವಿಸಿದರೇ ಶಕ್ತಿವರ್ಧನೆಯಾಗುತ್ತದೆ. ಇನ್ನೂ ಪಾಲಕ್ ಸೊಪ್ಪಿನ ಬಳಕೆಯಿಂದ ಅನಿಮಿಯಾ ಸಮಸ್ಯೆಯೂ ನಿವಾರಣೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...