ನವಜಾತ ಶಿಶುಗಳಿಗೆ ತಾಯಿಯ ಹಾಲು ಅಮೃತ. ಆರು ತಿಂಗಳವರೆಗೆ ಸ್ತನ್ಯಪಾನ ಮಾಡಿಸುವಂತೆ ವೈದ್ಯರು ಸಲಹೆ ನೀಡ್ತಾರೆ. ಇತ್ತೀಚಿನ ದಿನಗಳಲ್ಲಿ ಎದೆ ಹಾಲಿನ ಲೈಬ್ರರಿ ಕೂಡ ಮಾಡಲಾಗ್ತಿದೆ. ಈ ಮಧ್ಯೆ ಬ್ರಿಟನ್ ನಲ್ಲಿ ಮಹಿಳೆಯೊಬ್ಬಳು ಎದೆಹಾಲನ್ನು ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಗಳಿಸ್ತಿದ್ದಾಳೆ.
ಯುಕೆಯಲ್ಲಿ ನೆಲೆಸಿರುವ ಮಿಲಾ ಡೆಬ್ರಿಟೊ ತನ್ನ ಎದೆಹಾಲನ್ನು ಕುಸ್ತಿಪಟುಗಳಿಗೆ ಮಾರಾಟ ಮಾಡ್ತಾಳೆ. ಎದೆ ಹಾಲು ಅಗತ್ಯಕ್ಕಿಂತ ಹೆಚ್ಚಿದೆಯಂತೆ. ಹಾಗಾಗಿ ಮಾರಾಟ ಮಾಡ್ತಿರುವುದಾಗಿ ಆಕೆ ಹೇಳಿದ್ದಾಳೆ. ಮಿಲಾ ಡೆಬ್ರಿಟೊ ಟಿಕ್‌ಟಾಕ್‌ನಲ್ಲಿ ಈ ವಿಷ್ಯವನ್ನು ಹೇಳಿದ್ದಾಳೆ. ಇದನ್ನು ಲಿಕ್ವಿಡ್ ಗೋಲ್ಡ್ ಎಂದು ಕರೆದಿದ್ದಾಳೆ.
ಎದೆ ಹಾಲು ಸ್ನಾಯುಗಳಿಗೆ ತುಂಬಾ ಪ್ರಯೋಜನಕಾರಿ ಎಂಬ ಕಾರಣಕ್ಕೆ ಬಾಡಿ ಬಿಲ್ಡರ್ಸ್ ಇದನ್ನು ಖರೀದಿ ಮಾಡ್ತಿದ್ದಾರಂತೆ. ಒಂದು ಔನ್ಸ್ ಎದೆ ಹಾಲನ್ನು 100 ರೂಪಾಯಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡ್ತಾಳೆ. ಈಗಾಗಲೇ ಸುಮಾರು ಹತ್ತು ಲಕ್ಷ ರೂಪಾಯಿ ಗಳಿಸಿದ್ದಾಳೆ.
ಮದ್ಯಪಾನ ಹಾಗೂ ಧೂಮಪಾನ ಮಾಡುವುದಿಲ್ಲವೆಂದು ಮಿಲಾ ಹೇಳಿದ್ದಾಳೆ. ಬಾಡಿ ಬಿಲ್ಡರ್ಸ್ ಎದೆ ಹಾಲನ್ನು ಏನು ಮಾಡ್ತಾರೆ ಎಂಬುದು ತಿಳಿದಿಲ್ಲವೆಂದೂ ಆಕೆ ಹೇಳಿದ್ದಾಳೆ. ಆಕೆ ವಿಡಿಯೋಕ್ಕೆ ನಾನಾ ರೀತಿಯ ಪ್ರತಿಕ್ರಿಯೆ ಬಂದಿದೆ. ಕೆಲ ತಿಂಗಳ ನಂತ್ರ ಎದೆ ಹಾಲಿನ ಗುಣಮಟ್ಟ ಕಡಿಮೆಯಾಗುತ್ತದೆ ಎಂದು ಅನೇಕರು ಹೇಳಿದ್ದಾರೆ. ನಿರ್ಗತಿಕ ಮಕ್ಕಳಿಗೆ ಈ ಹಾಲನ್ನು ನೀಡಬಹುದು ಎಂದು ತಜ್ಞರು ಹೇಳಿದ್ದಾರೆ.