alex Certify BIG NEWS: ಭಾರತದ ‘ಭೀಮ್​ – ಯುಪಿಐ’ ವ್ಯವಹಾರಕ್ಕೆ ಭೂತಾನ್​​ನಲ್ಲೂ ಸಿಕ್ಕಿತು ಹಸಿರು ನಿಶಾನೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತದ ‘ಭೀಮ್​ – ಯುಪಿಐ’ ವ್ಯವಹಾರಕ್ಕೆ ಭೂತಾನ್​​ನಲ್ಲೂ ಸಿಕ್ಕಿತು ಹಸಿರು ನಿಶಾನೆ..!

ಭಾರತದ ಕ್ಯೂಆರ್​ ಕೋಡ್​​​ ಯುಪಿಐ ಪಾವತಿ ವಿಧಾನವನ್ನ ಭೂತಾನ್​ ರಾಷ್ಟ್ರವೂ ಅಳವಡಿಸಿಕೊಂಡಿದೆ. ಈ ಮೂಲಕ ಭಾರತದ ಕ್ಯೂಆರ್​ ಕೋಡ್​ ಯುಪಿಐ ಪಾವತಿ ವಿಧಾನವನ್ನ ಅಳವಡಿಸಿಕೊಂಡ ಮೊದಲ ವಿದೇಶಿ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭೂತಾನ್​ ಪಾತ್ರವಾಗಿದೆ.

ಮಂಗಳವಾರ ನಡೆದ ಸಮಾರಂಭವೊಂದರಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಹಾಗೂ ಭೂತಾನ್​​ ಕೌಂಟರ್​​ ಲಿಯಾಲ್ಪೋ ನಾಮ್​​ಗೆ ತ್ಸೆರಿಂಗ್​ ಜಂಟಿಯಾಗಿ ಭೂತಾನ್​​ನಲ್ಲಿ ಭೀಮ್​ – ಯುಪಿಐ ವ್ಯವಹಾರಕ್ಕೆ ಚಾಲನೆ ನೀಡಿದ್ರು.

ಭೀಮ್​ ಆ್ಯಪ್​ ಮೂಲಕ ಮೊಬೈಲ್​ ಆಧಾರಿತ ಪೇಮೆಂಟ್​ಗಳಿಗೆ ಒಪ್ಪಿಗೆ ನೀಡಿದ ಭಾರತದ ಮೊದಲ ನೆರೆಯ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಭೂತಾನ್​ ಪಾತ್ರವಾಗಿದೆ.

ಯುಪಿಐ ವ್ಯವಹಾರಕ್ಕೆ ಚಾಲನೆ ನೀಡಿದ ಬಳಿಕ, ನಿರ್ಮಲಾ ಸೀತಾರಾಮನ್​ ಭೂತಾನ್​ನ ಸ್ಥಳೀಯ ಸಮುದಾಯಗಳು ತಯಾರಿಸುವ ತಾಜಾ ಕೃಷಿ ಉತ್ಪನ್ನಗಳನ್ನ ಮಾರಾಟ ಮಾಡುವ ಒಜಿಒಪಿ ಔಟ್​ಲೆಟ್​​ನಿಂದ ಸಾವಯವ ಕೃಷಿ ಪದಾರ್ಥಗಳನ್ನ ಖರೀದಿ ಮಾಡಿ ಭೀಮ್​ ಆ್ಯಪ್​ ಮೂಲಕವೇ ಹಣ ಪಾವತಿ ಮಾಡಿದರು.‌

ಭೂತಾನ್​ನಲ್ಲಿ ಇಂದು ಭೀಮ್​ – ಯುಪಿಐ ವ್ಯವಹಾರ ಆರಂಭವಾಗಿದ್ದು ಈ ಮೂಲಕ ಉಭಯ ದೇಶಗಳ ಪಾವತಿ ವಿಧಾನ ಇನ್ನಷ್ಟು ಹತ್ತಿರವಾಗಿದೆ. ಇದರಿಂದಾಗಿ ಭಾರತ ಹಾಗೂ ಭೂತಾನ್​ ನಡುವೆ ಪ್ರಯಾಣ ಬೆಳೆಸುವ ಪ್ರವಾಸಿಗರು ಹಾಗೂ ಉದ್ಯಮಿಗಳಿಗೆ ಅನುಕೂಲಕರವಾಗಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...