ಒಂದು ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಅಡಿಯಲ್ಲಿ ಛತ್ತೀಸಗಢ ಸಿಎಂ ಭೂಪೇಶ್ ಬಘೇಲ್ ತಂದೆ ನಂದಕುಮಾರ್ ಬಘೇಲ್ರನ್ನ ಪೊಲೀಸರು ಬಂಧಿಸಿದ್ದಾರೆ.
ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪವನ್ನು ನಂದಕುಮಾರ್ ಎದುರಿಸುತ್ತಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಛತ್ತೀಸಗಢ ಸಿಎಂ ಭೂಪೇಶ್ ಬಘೇಲ್ ಸಮುದಾಯದ ಬಗ್ಗೆ ಈ ರೀತಿ ಹೇಳಿಕೆ ನೀಡಿರೋದು ನೋವುಂಟು ಮಾಡಿದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ರು. ರಾಜ್ಪುರ ಕೋರ್ಟ್ ನಂದ ಕುಮಾರ್ರನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸಿದೆ.
ಡಿಡಿ ನಗರ ಪೊಲೀಸ್ ಠಾಣೆಯಲ್ಲಿ ನಂದಕುಮಾರ್ ವಿರುದ್ಧ ಸರ್ವ ಬ್ರಾಹ್ಮಣ ಸಮಾಜ ದೂರನ್ನು ದಾಖಲಿಸಿತ್ತು. ಈ ಸಂಬಂಧ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ನಂದಕುಮಾರ್ ಬಘೇಲ್(86)ರನ್ನು ಬಂಧಿಸಿದ್ದಾರೆ. ನಂದಕುಮಾರ್ ವಿರುದ್ಧ ರ್ಯಾಲಿ ನಡೆಸಿದ್ದ ಬ್ರಾಹ್ಮಣ ಸಮಾಜ ಅವರನ್ನು ಬಂಧಿಸುವಂತೆ ಆಗ್ರಹಿಸಿತ್ತು.