alex Certify Shocking: ಸಾಲ ತೀರಿಸಲಾಗದೇ ವಿಷ ಸೇವಿಸಿದ ಒಂದೇ ಕುಟುಂಬದ ಐವರು..! ಮೂವರ ಸಾವು, ಇಬ್ಬರ ಸ್ಥಿತಿ ಚಿಂತಾಜನಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ಸಾಲ ತೀರಿಸಲಾಗದೇ ವಿಷ ಸೇವಿಸಿದ ಒಂದೇ ಕುಟುಂಬದ ಐವರು..! ಮೂವರ ಸಾವು, ಇಬ್ಬರ ಸ್ಥಿತಿ ಚಿಂತಾಜನಕ

ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ಕುಟುಂಬವೊಂದು ಸಾಲವನ್ನು ತೀರಿಸಲಾಗದೇ ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಐವರಲ್ಲಿ ಮೂವರು ಸಾವನ್ನಪ್ಪಿದ ಘಟನೆ ಭೋಪಾಲ್​ ಜಿಲ್ಲೆಯ ಪಿಪ್ಲಾನಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉಳಿದ ಇಬ್ಬರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದಂಪತಿ ಹಾಗೂ ಅವರ ಇಬ್ಬರು ಪುತ್ರಿಯರು ಮತ್ತು ವ್ಯಕ್ತಿಯ ತಾಯಿ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಾವಿಗೂ ಮುನ್ನ ಇಬ್ಬರು ಬಾಲಕಿಯರು ಹಾಗೂ ವ್ಯಕ್ತಿಯ ತಾಯಿ ಮನೆ ಗೋಡೆಯ ಮೇಲೆ ಆತ್ಮಹತ್ಯೆ ಪತ್ರವನ್ನು ಬರೆದಿದ್ದಾರೆ.

ಹಾಗೂ ಸಂಬಂಧಿಕರಿಗೆ ವಾಟ್ಸಾಪ್​ ಮೂಲಕ ಆತ್ಮಹತ್ಯೆ ನೋಟ್​ ಕಳುಹಿಸಲಾಗಿದೆ. ಐವರಲ್ಲಿ ಅಜ್ಜಿ ಹಾಗೂ ಇಬ್ಬರು ಮೊಮ್ಮಕ್ಕಳು ಸಾವನ್ನಪ್ಪಿದ್ದರೆ ದಂಪತಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಇನ್ನು ಈ ಪ್ರಕರಣದ ಸಂಬಂಧ ಪ್ರತಿಕ್ರಿಯೆ ನೀಡಿದ ಪೊಲೀಸ್​ ಅಧಿಕಾರಿ ರಾಕೇಶ್​ ಶ್ರೀವಾತ್ಸವ, ಆನಂದ ವಿಹಾರ ಕಾಲೋನಿ ಎಂಬಲ್ಲಿ ಕುಟುಂಬವೊಂದು ಆತ್ಮಹತ್ಯೆಗೆ ಯತ್ನಿಸಿದೆ. ಮಾಹಿತಿ ಸಿಕ್ಕ ತಕ್ಷಣ ನಾವು ಸ್ಥಳಕ್ಕೆ ಆಗಮಿಸಿದ್ದು ಎಲ್ಲರನ್ನೂ ಆಸ್ಪತ್ರೆಗೆ ಸಾಗಿಸಿದ್ದೇವೆ. ಆತ್ಮಹತ್ಯೆ ನೋಟ್​ನ್ನು ಪರಿಶೀಲನೆ ಮಾಡಲಾಗುತ್ತಿದೆ. ಅತಿಯಾಗಿ ಸಾಲವನ್ನು ಮಾಡಿದ್ದ ಇವರು ಅದನ್ನು ತೀರಿಸಲಾಗದೇ ಈ ನಿರ್ಧಾರ ಕೈಗೊಂಡಿದ್ದಾರೆ ಅನ್ನೋದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...