alex Certify VIDEO | ವೇದಿಕೆಯಲ್ಲಿ ಹಾಡುತ್ತಿದ್ದಾಗ ದುಡ್ಡಿನ ಸುರಿಮಳೆ: ಕೋಪಗೊಂಡು ಷೋ ನಿಲ್ಲಿಸಿದ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

VIDEO | ವೇದಿಕೆಯಲ್ಲಿ ಹಾಡುತ್ತಿದ್ದಾಗ ದುಡ್ಡಿನ ಸುರಿಮಳೆ: ಕೋಪಗೊಂಡು ಷೋ ನಿಲ್ಲಿಸಿದ ನಟಿ

ಜನಪ್ರಿಯ ಭೋಜ್‌ಪುರಿ ನಟಿ ಮತ್ತು ಗಾಯಕಿ, ಬಿಗ್ ಬಾಸ್ ಒಟಿಟಿ ಸ್ಪರ್ಧಿ ಅಕ್ಷರಾ ಸಿಂಗ್ ಅವರು ಇತ್ತೀಚೆಗೆ ಲೈವ್ ಶೋನಲ್ಲಿ ಸಾವಿರಾರು ಜನರನ್ನು ಉದ್ದೇಶಿಸಿ ಹಾಡುವಾಗ ಅಸಹ್ಯಕರ ಘಟನೆಯೊಂದು ನಡೆದಿದೆ.

ವೇದಿಕೆಯಲ್ಲಿ ಹಾಡನ್ನು ಹಾಡುತ್ತಿರುವಾಗ ವ್ಯಕ್ತಿಯೊಬ್ಬನಿಂದ ಈಕೆ ಅವಮಾನಕ್ಕೆ ಒಳಗಾಗಿದ್ದು, ಕೋಪದಿಂದ ನಟಿ ವೇದಿಕೆಯಿಂದ ಹೊರನಡೆದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಅಭಿಮಾನಿಗಳಿಗಾಗಿ ಭೋಜ್‌ಪುರಿ ಹಾಡನ್ನು ಹಾಡುತ್ತಿದ್ದ ಅಕ್ಷರಾ ಸಿಂಗ್ ಒಳ್ಳೆಯ ಮೂಡ್‌ನಲ್ಲಿದ್ದರು. ಹಾಡನ್ನು ಹಾಡುತ್ತಿದ್ದಾಗ ಒಬ್ಬ ವ್ಯಕ್ತಿ ವೇದಿಕೆಯ ಮೇಲೆ ಬಂದು ಆಕೆಯ ಮೇಲೆ ಕರೆನ್ಸಿ ನೋಟುಗಳ ಸುರಿಮಳೆಗೈದ. ಅವರ ಹಾವಭಾವ ನಟಿಗೆ ಸರಿ ಹೋಗಲಿಲ್ಲ. ಈ ಹಿನ್ನೆಲೆಯಲ್ಲಿ ಈಕೆ ಕೋಪಗೊಂಡು ಕಾರ್ಯಕ್ರಮವನ್ನು ಮಧ್ಯದಲ್ಲಿಯೇ ಬಿಟ್ಟರು.

ಸಂಘಟಕನಿಗೆ ಮೈಕ್ ಕೊಟ್ಟು ಕೋಪದಿಂದ ವೇದಿಕೆಯಿಂದ ಅಕ್ಷರಾ ಹೊರನಡೆದರು. ಸೋಶಿಯಲ್ ಮೀಡಿಯಾದಲ್ಲಿ ಅಕ್ಷರಾ ಈ ಘಟನೆಯ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಆದರೆ, ಆಕೆಯ ಅಭಿಮಾನಿಗಳು ಮಾತ್ರ ತಮ್ಮ ಪ್ರೀತಿಯ ನಟಿಯ ಪರವಾಗಿ ನಿಂತಿದ್ದಾರೆ. ಹಣವನ್ನು ಸುರಿದ ವ್ಯಕ್ತಿಯ ಬಗ್ಗೆ ಕಿಡಿ ಕಾರಿದ್ದು, ನಟಿ ಒಳ್ಳೆಯ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...