
ಫೆಬ್ರವರಿ 25ರಂದು ತೆರೆಮೇಲೆ ಬರಲು ಸಜ್ಜಾಗಿರುವ ಪವನ್ ಕಲ್ಯಾಣ್ ನಟನೆಯ ‘ಭೀಮ್ಲಾ ನಾಯಕ್’ ಸಿನಿಮಾ ಟ್ರೈಲರ್ ಫೆಬ್ರವರಿ 21ರಂದು ರಿಲೀಸ್ ಆಗಲಿದೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ಚಿತ್ರದ ಟ್ರೈಲರ್ ಎಂದರೆ ಹಲವು ದಾಖಲೆಗಳನ್ನು ಮುರಿಯಲು ಸಜ್ಜಾಗಿರುತ್ತದೆ. ಇಷ್ಟು ದಿನ ಕಾತುರದಿಂದ ಕಾಯುತ್ತಿದ್ದ ಪವನ್ ಕಲ್ಯಾಣ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಿದ್ದಾರೆ.
ʼಗಂಗೂಬಾಯಿ ಕಥಿಯಾವಾಡಿʼ ಚಿತ್ರದ ಹಾಡಿಗೆ ಗಗನಸಖಿಯ ಬೊಂಬಾಟ್ ಡಾನ್ಸ್…..!
ಸಿತಾರ ಎಂಟರ್ ಟೈನ್ ಮೆಂಟ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಸಾಗರ್ ಕೆ ಚಂದ್ರ ಆಕ್ಷನ್ ಕಟ್ ಹೇಳಿದ್ದಾರೆ. ಎಸ್ ತಮನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಮುರಳಿ ಶರ್ಮಾ ಸಂಯುಕ್ತ ಮೆನನ್ ನಿತ್ಯಾ ಮೆನನ್, ಸಾಕು ಬಾಬು ಸೇರಿದಂತೆ ಈ ಸಿನಿಮಾದಲ್ಲಿ ಮೊದಲಾದ ಕಲಾವಿದರು ಬಣ್ಣ ಹಚ್ಚಿದ್ದಾರೆ.