alex Certify ಗಮನಿಸಿ..! ಶುಕ್ರವಾರ ಭಾರತ್ ಬಂದ್ ಗೆ ಭಾರೀ ಬೆಂಬಲ, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಚಕ್ಕಾ ಜಾಮ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ..! ಶುಕ್ರವಾರ ಭಾರತ್ ಬಂದ್ ಗೆ ಭಾರೀ ಬೆಂಬಲ, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಚಕ್ಕಾ ಜಾಮ್

ನವದೆಹಲಿ: ಏರಿಕೆಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ವಿರೋಧಿಸಿ ಫೆಬ್ರವರಿ 26 ರಂದು ವ್ಯಾಪಾರಿಗಳ ಸಂಘಟನೆ ಭಾರತ್ ಬಂದ್ ಗೆ ಕರೆ ನೀಡಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡಬೇಕು. ಸರಕು ಮತ್ತು ಸೇವಾ ತೆರಿಗೆ ಹಾಗೂ ಇ -ವೇ ಬಿಲ್ ಸಮಸ್ಯೆ ನಿವಾರಿಸಬೇಕೆಂದು ಒತ್ತಾಯಿಸಿ ರಾಷ್ಟ್ರವ್ಯಾಪಿ ಬಂದ್ ಗೆ ಕರೆ ನೀಡಲಾಗಿದೆ.

ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಕರೆ ನೀಡಿದ ಫೆಬ್ರವರಿ 26 ರಂದು ಶುಕ್ರವಾರದ ಭಾರತ್ ಈ ಬಂದ್ ಗೆ ಅಖಿಲ ಭಾರತ ಸಾರಿಗೆ ಕಲ್ಯಾಣ ಸಂಘ ಕೂಡ ಬೆಂಬಲ ನೀಡಿದ್ದು, ಅಂದು ಚಕ್ಕಾ ಜಾಮ್(ರಸ್ತೆ ದಿಗ್ಬಂದನ) ನಡೆಸುವುದಾಗಿ ಘೋಷಿಸಲಾಗಿದೆ.

ಹೊಸ ಇ – ವೇ ಬಿಲ್ ಮಸೂದೆ ರದ್ದುಗೊಳಿಸಬೇಕೆಂದು ಒತ್ತಾಯಿಸಲಾಗಿದೆ. ಮಸೂದೆ ರದ್ದುಗೊಳಿಸದಿದ್ದರೆ ಕೆಲವು ನಿಯಮಗಳನ್ನು ಕೈಬಿಡಬೇಕೆಂದು ಆಗ್ರಹಿಸಲಾಗಿದೆ. ಇಂಧನ ಬೆಲೆ ವಿಶೇಷವಾಗಿ ಡೀಸೆಲ್ ಮೇಲಿನ ಭಾರಿ ತೆರಿಗೆಯನ್ನು ಹಿಂಪಡೆಯಬೇಕು. ದೇಶಾದ್ಯಂತ ಏಕರೂಪದ ದರ, ತೆರಿಗೆ ವ್ಯವಸ್ಥೆ ತರಬೇಕೆಂದು ಒತ್ತಾಯಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...