ನವದೆಹಲಿ: ಏರಿಕೆಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ವಿರೋಧಿಸಿ ಫೆಬ್ರವರಿ 26 ರಂದು ವ್ಯಾಪಾರಿಗಳ ಸಂಘಟನೆ ಭಾರತ್ ಬಂದ್ ಗೆ ಕರೆ ನೀಡಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡಬೇಕು. ಸರಕು ಮತ್ತು ಸೇವಾ ತೆರಿಗೆ ಹಾಗೂ ಇ -ವೇ ಬಿಲ್ ಸಮಸ್ಯೆ ನಿವಾರಿಸಬೇಕೆಂದು ಒತ್ತಾಯಿಸಿ ರಾಷ್ಟ್ರವ್ಯಾಪಿ ಬಂದ್ ಗೆ ಕರೆ ನೀಡಲಾಗಿದೆ.
ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಕರೆ ನೀಡಿದ ಫೆಬ್ರವರಿ 26 ರಂದು ಶುಕ್ರವಾರದ ಭಾರತ್ ಈ ಬಂದ್ ಗೆ ಅಖಿಲ ಭಾರತ ಸಾರಿಗೆ ಕಲ್ಯಾಣ ಸಂಘ ಕೂಡ ಬೆಂಬಲ ನೀಡಿದ್ದು, ಅಂದು ಚಕ್ಕಾ ಜಾಮ್(ರಸ್ತೆ ದಿಗ್ಬಂದನ) ನಡೆಸುವುದಾಗಿ ಘೋಷಿಸಲಾಗಿದೆ.
ಹೊಸ ಇ – ವೇ ಬಿಲ್ ಮಸೂದೆ ರದ್ದುಗೊಳಿಸಬೇಕೆಂದು ಒತ್ತಾಯಿಸಲಾಗಿದೆ. ಮಸೂದೆ ರದ್ದುಗೊಳಿಸದಿದ್ದರೆ ಕೆಲವು ನಿಯಮಗಳನ್ನು ಕೈಬಿಡಬೇಕೆಂದು ಆಗ್ರಹಿಸಲಾಗಿದೆ. ಇಂಧನ ಬೆಲೆ ವಿಶೇಷವಾಗಿ ಡೀಸೆಲ್ ಮೇಲಿನ ಭಾರಿ ತೆರಿಗೆಯನ್ನು ಹಿಂಪಡೆಯಬೇಕು. ದೇಶಾದ್ಯಂತ ಏಕರೂಪದ ದರ, ತೆರಿಗೆ ವ್ಯವಸ್ಥೆ ತರಬೇಕೆಂದು ಒತ್ತಾಯಿಸಲಾಗಿದೆ.