alex Certify ಇಂಟ್ರಸ್ಟಿಂಗ್‌ ಆಗಿದೆ ಉಪ ಚುನಾವಣಾ ಕಣದಲ್ಲಿನ ಅಭ್ಯರ್ಥಿಗಳಲ್ಲಿರುವ ಈ ಸಾಮ್ಯತೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಟ್ರಸ್ಟಿಂಗ್‌ ಆಗಿದೆ ಉಪ ಚುನಾವಣಾ ಕಣದಲ್ಲಿನ ಅಭ್ಯರ್ಥಿಗಳಲ್ಲಿರುವ ಈ ಸಾಮ್ಯತೆ..!

ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಉಪಚುನಾವಣೆಯು ಈಗಾಗಲೇ ಸಾಕಷ್ಟು ಕಾರಣಕ್ಕೆ ಕುತೂಹಲ ಕೆರಳಿಸಿದೆ. ಮತ್ತೊಂದು ಅಚ್ಚರಿಯ ವಿಚಾರ ಅಂದರೆ ಈ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಮೂವರು ಪ್ರಮುಖ ನಾಯಕರು ವಕೀಲ ವೃತ್ತಿ ವ್ಯಾಸಂಗ ಮಾಡಿದವರೇ ಆಗಿದ್ದಾರೆ..!

ಪ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೋಲ್ಕತ್ತಾದ ಜೋಗೇಶ್​ ಚಂದ್ರ ಕಾಲೇಜಿನಲ್ಲಿ 1982ರಲ್ಲಿ ಎಲ್​ಎಲ್​ಬಿ ವ್ಯಾಸಂಗ ಮಾಡಿದ್ದಾರೆ. ಆರಂಭದ ದಿನಗಳಲ್ಲಿ ಮಮತಾ ಕೋರ್ಟ್​ನಲ್ಲಿ ಪ್ರ್ಯಾಕ್ಟೀಸ್​ ಕೂಡ ಮಾಡಿದ್ದರು.

ಮಮತಾ ಬ್ಯಾನರ್ಜಿ ಎಲೆಕ್ಷನ್​ ಏಜೆಂಟ್​ ಆಗಿರುವ ಟಿಎಂಸಿ ನಾಯಕ ಬೈಶ್ಯಾನೋರ್​ ಚಟರ್ಜಿ ಈ ವಿಚಾರವಾಗಿ ಮಾತನಾಡಿದ್ದು, ದೀದಿಯನ್ನು ನಾವು ಕೋರ್ಟ್​ನಲ್ಲಿ ನೋಡಿದ್ದೇವೆ. ಇವರು ಕಾಂಗ್ರೆಸ್​ನಲ್ಲಿದ್ದ ವೇಳೆ ನಮ್ಮ ನಾಯಕರಾದ ಪಂಕಜ್​ ಬ್ಯಾನರ್ಜಿ ಬಂಧನವಾಗಿತ್ತು. ಆಗ ಕೋರ್ಟ್​ನಲ್ಲಿ ನಿಂತ ಮಮತಾ, ಪಂಕಜ್​ ಬ್ಯಾನರ್ಜಿಗೆ ಜಾಮೀನು ಕೊಡಿಸಿದ್ದರು. ದೀದಿ ಬಾರ್​ ಕೌನ್ಸಿಲ್​ನಲ್ಲಿ ನೋಂದಣಿ ಮಾಡಿಸಿದ್ದಾರೆ. ಹೀಗಾಗಿ ದೀದಿ ಹಿರಿಯ ರಾಜಕಾರಣಿ ಮಾತ್ರವಲ್ಲದೇ ಹಿರಿಯ ವಕೀಲೆ ಕೂಡ ಹೌದು ಎಂದು ಹೇಳಿದ್ದಾರೆ.

ಪ್ರಿಯಾಂಕಾ ಟಿಬ್ರೆವಾಲ್​ ಹಜ್ರಾ ಕೂಡ ಕಾನೂನು ವಿಭಾಗದಲ್ಲೇ ವ್ಯಾಸಂಗ ಮಾಡಿದ್ದಾರೆ. ಇವರು ಬಿಜೆಪಿ ಪರ ಹೋರಾಡಿದ ಪ್ರಸಿದ್ಧ ವಕೀಲೆ ಕೂಡ ಹೌದು. 2021ರ ಚುನಾವಣಾ ಫಲಿತಾಂಶದ ಬಳಿಕ ಚುನಾವಣೋತ್ತರ ಹಿಂಸಾಚಾರಗಳ ಬಗ್ಗೆ ಹೋರಾಡಿದ್ದರು.

ಈ ಪ್ರಕರಣದಲ್ಲಿ ವಕೀಲರಾಗಿ ಪ್ರಿಯಾಂಕಾರ ಕಾರ್ಯಕ್ಷಮತೆ ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ಇದೇ ಇವರಿಗೆ ಚುನಾವಣೆ ಟಿಕೆಟ್​ ಸಿಗಲು ಪ್ರಮುಖ ಕಾರಣ ಎಂಬ ಮಾತು ಕೂಡ ಇದೆ. ಈ ವಿಚಾರವಾಗಿ ಮಾತನಾಡಿದ ಪ್ರಿಯಾಂಕಾ, ನಾನು ಕೋರ್ಟ್​ನಲ್ಲಿ ಈಗಾಗಲೇ ಮಮತಾ ಬ್ಯಾನರ್ಜಿಯವರನ್ನು ಸೋಲಿಸಿದ್ದೇನೆ. ಎರಡನೇ ಬಾರಿ ನಾನು ಅವರನ್ನು ಚುನಾವಣಾ ಅಖಾಡದಲ್ಲಿ ಸೋಲಿಸುತ್ತೇನೆ ಎಂದು ಹೇಳಿದ್ದಾರೆ.

ಸಿಪಿಐ(ಎಂ) ಅಭ್ಯರ್ಥಿ ಶ್ರೀಜಿಬ್​​ ವಿಶ್ವಾಸ್​ ಕೂಡ ಅಲಿಪುರ ಕೋರ್ಟ್​ನ ವಕೀಲರಾಗಿದ್ದಾರೆ. ಇವರು ಹಜ್ರಾ ಕಾನೂನು ಕಾಲೇಜಿನ ಹಳೆಯ ವಿದ್ಯಾರ್ಥಿ. 2014ರಿಂದ ಅವರು ವಕೀಲಿ ವೃತ್ತಿಯನ್ನು ಪ್ರ್ಯಾಕ್ಟೀಸ್​ ಮಾಡುತ್ತಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ವಿಶ್ವಾಸ್​, ಇದು ನಿಜಕ್ಕೂ ಒಂದು ಕಾಕತಾಳೀಯ ವಿಚಾರ. ನಾನು ಮಮತಾ ಬ್ಯಾನರ್ಜಿಯನ್ನು ವಕೀಲೆ ಎಂದು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅವರು ರಾಜಕಾರಣಿ ಮಾತ್ರ. ಪ್ರಿಯಾಂಕಾ ಹಿರಿಯ ವಕೀಲೆ. ಆದರೆ ಕಾನೂನು ಯುದ್ಧಕ್ಕೂ ರಾಜಕೀಯ ಯುದ್ಧಕ್ಕೂ ತುಂಬಾನೇ ವ್ಯತ್ಯಾಸವಿದೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...