alex Certify ದಾಖಲೆ ಸಲ್ಲಿಸುವುದನ್ನು ಮರೆತ ವಿದ್ಯಾರ್ಥಿನಿಗೆ ಮೆಡಿಕಲ್ ಸೀಟ್ ಕೈ ತಪ್ಪುವ ಭೀತಿ: ದುಡುಕಿನ ನಿರ್ಧಾರ ಕೈಗೊಂಡು ಆತ್ಮಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾಖಲೆ ಸಲ್ಲಿಸುವುದನ್ನು ಮರೆತ ವಿದ್ಯಾರ್ಥಿನಿಗೆ ಮೆಡಿಕಲ್ ಸೀಟ್ ಕೈ ತಪ್ಪುವ ಭೀತಿ: ದುಡುಕಿನ ನಿರ್ಧಾರ ಕೈಗೊಂಡು ಆತ್ಮಹತ್ಯೆ

ಬಾಗಲಕೋಟೆ: ಬಾಗಲಕೋಟೆ ನಗರದ ವಿದ್ಯಾಗಿರಿ ನಿವಾಸಿಯಾಗಿರುವ ವಿದ್ಯಾರ್ಥಿನಿ ದಾಖಲೆ ಸಲ್ಲಿಸದ ಕಾರಣ ಮೆಡಿಕಲ್ ಕೋರ್ಸ್ ಗೆ ಪ್ರವೇಶ ಸಿಗುವುದಿಲ್ಲ ಎಂದು ಆತಂಕಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

20 ವರ್ಷದ ನಿತ್ಯಾ ಬಿದರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಪ್ರವೇಶಕ್ಕೆ ಅರ್ಹತೆ ಗಳಿಸಿದ ನಿತ್ಯಾ ಕಾಲೇಜಿಗೆ ಸಲ್ಲಿಸಬೇಕಾದ ದಾಖಲೆಗಳ ಪೈಕಿ ಒಂದು ದಾಖಲೆ ಸಲ್ಲಿಸುವುದನ್ನು ಮರೆತಿದ್ದರು.

ಪರಿಶೀಲನೆ ಮಾಡಿದಾಗ ದಾಖಲೆ ಸಲ್ಲಿಸುವ ಅವಧಿ ಮುಕ್ತಾಯಗೊಂಡಿತ್ತು. ಇದರಿಂದಾಗಿ ಖಿನ್ನತೆಗೆ ಒಳಗಾದ ನಿತ್ಯಾ ಮೆಡಿಕಲ್ ಸೀಟ್ ಸಿಗುವುದಿಲ್ಲ ಎಂದು ಭಾವಿಸಿ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾರೆ. ದುಡುಕಿನ ನಿರ್ಧಾರ ಕೈಗೊಂಡು ನೇಣು ಹಾಕಿಕೊಂಡಿದ್ದ ನಿತ್ಯಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಎರಡು ದಿನಗಳ ನಂತರ ಮೃತಪಟ್ಟಿದ್ದಾರೆ. ಬಾಗಲಕೋಟೆ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...