alex Certify ಎಚ್ಚರ…! ಅಪ್ಪಿತಪ್ಪಿಯೂ ಈ ಚೈನಾ ಲೋನ್ ಆಪ್‌ ಡೌನ್ಲೋಡ್‌ ಮಾಡಿಕೊಂಡೀರಿ ‌ʼಜೋಕೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಚ್ಚರ…! ಅಪ್ಪಿತಪ್ಪಿಯೂ ಈ ಚೈನಾ ಲೋನ್ ಆಪ್‌ ಡೌನ್ಲೋಡ್‌ ಮಾಡಿಕೊಂಡೀರಿ ‌ʼಜೋಕೆʼ

ಚೈನಾ ಲೋನ್​ ಆ್ಯಪ್​ ಹಾವಳಿ ದೇಶದ ಉದ್ದಗಲಕ್ಕೂ ವಿಪರೀತವಾಗಿದೆ. ಇದೀಗ ದೆಹಲಿ ಪೊಲೀಸರು ವಂಚಕರ ಒಂದು ದೊಡ್ಡ ಜಾಲವನ್ನು ಬಲೆಗೆ ಕೆಡವಿಕೊಂಡಿದ್ದಾರೆ.

ಆನ್​ಲೈನ್​ ಸಾಲ ನೀಡುವ ಹಗರಣ ನಡೆಸುತ್ತಿದ್ದ ಅನಿಲ್​ ಕುಮಾರ್​ (35), ಅಲೋಕ್​ ಶರ್ಮಾ (24), ಅವನೀಶ್​ (22) ಮತ್ತು ಕಣ್ಣನ್​ (35)ನನ್ನು ಪೊಲೀಸರು ಬಂಧಿದ್ದಾರೆ. ಈ ನಾಲ್ವರನ್ನು ಹೊರತುಪಡಿಸಿ, ನಕಲಿ ಕಾಲ್​ ಸೆಂಟರ್​ನ ಭಾಗವಾಗಿದ್ದ 149 ಮಂದಿಗೆ ಸಹ ಪೊಲೀಸರು ನೋಟಿಸ್​ ಜಾರಿ ಮಾಡಿದ್ದಾರೆ.

ಯಾವುದೇ ಅಡೆತಡೆ ಇಲ್ಲದೇ 50,000 ರೂ.ಗಳ ಸಾಲ ನೀಡುವ ಕುರಿತು ಆನ್​ ಸ್ಟ್ರೀಮ್​ ಹೆಸರಿನ ಅಪ್ಲಿಕೇಶನ್​ ಬಗ್ಗೆ ಫೇಸ್​ಬುಕ್​ನಲ್ಲಿ ಜಾಹೀರಾತಿನಿಂದ ಆಮಿಷಕ್ಕೆ ಒಳಗಾದ ನಂತರ ಎನ್​ಸಿಆರ್​ಪಿ ಪೋರ್ಟಲ್​ನಲ್ಲಿ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದರು.

ಈ ಅಪ್ಲಿಕೇಶನ್​ ಅನ್ನು ಡೌನ್​ಲೋಡ್​ ಮಾಡುವಾಗ, ದೂರುದಾರನು ತನ್ನ ಫೋನ್​ನ ಕ್ಯಾಂಟ್ಯಾಕ್ಟ್​ ಲಿಸ್ಟ್​, ಗ್ಯಾಲರಿ ಇತ್ಯಾದಿಗಳಿಗೆ ಪ್ರವೇಶ ನೀಡಬೇಕಾಯಿತು. ಬಳಿಕ ಆತನಿಗೆ 6,870 ರೂ. ಸಾಲವನ್ನು ನೀಡಲಾಯಿತು, ನಂತರ ಆರೋಪಿಗಳು ಆತನ ಮೊಬೈಲ್​ನಲ್ಲಿದ್ದ ಕಾಂಟ್ಯಾಕ್ಟ್​ ಲಿಸ್ಟ್​, ಫೋಟೋಗಳನ್ನು ಬಳಸಿ ಕಿರುಕುಳ ನೀಡಲು ಪ್ರಾರಂಭಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಮಸ್ಯೆಯಿಂದ ಹೊರಬರಲು ಆ ಸಂತ್ರಸ್ತರು ಆರೋಪಿಗಳಿಗೆ 1 ಲಕ್ಷ ರೂ. ಪಾವತಿಸಿದ್ದಾರೆ, ಆದರೆ ಆ ತಂಡ ಹೆಚ್ಚಿನ ಹಣಕ್ಕಾಗಿ ಅವಹೇಳನಕಾರಿ ಸಂದೇಶಗಳನ್ನು ಕಳುಹಿಸುತ್ತಿದ್ದರು.

134 ಮಹಿಳಾ ಟೆಲಿ ಕಾಲರ್​ಗಳು, 15 ಪುರುಷ ಕಾಲರ್​ಗಳು ಮತ್ತು ಮೂವರು ಟೀಮ್​ ಲೀಡರ್​ಗಳ ಮೂಲಕ ಇಡೀ ಸಿಂಡಿಕೇಟ್ ​ಅನ್ನು ಮಾಸ್ಟರ್​ಮೈಂಡ್​ ಅನಿಲ್​ ಕುಮಾರ್​ ನಡೆಸುತ್ತಿರುವುದು ಕಂಡುಬಂದಿದೆ.

ಸಿಲ್ಪಾನಿ ಇಂಟರ್​ನ್ಯಾಷನಲ್​ ಹೆಸರಿನಲ್ಲಿ ಸಂಸ್ಥೆಯನ್ನು ಹುಟ್ಟುಹಾಕಿ ಆ ಮೂಲಕ ಅವರು 300 ಸಿಮ್​ ಕಾರ್ಡ್​ಗಳನ್ನು ಖರೀದಿಸಿದ್ದಾರೆ, ಅದರಲ್ಲಿ 100 ನ್ನು ಅವಹೇಳನಕಾರಿ ವಾಟ್ಸಾಪ್​ ಸಂದೇಶಗಳನ್ನು ಕಳುಹಿಸಲು, ಸಂತ್ರಸ್ತರನ್ನು ತಮ್ಮ ಸುಲಿಗೆ ಬೆದರಿಕೆಗಳಿಗೆ ಬೀಳುವಂತೆ ಒತ್ತಾಯಿಸಲು ಬಳಸಲಾಗಿದೆ. ಉಳಿದ 200 ಸಿಮ್​ ಕಾರ್ಡ್​ಗಳನ್ನು ಸ್ಪ್ಯಾಮ್​ ಎಂದು ಹೆಸರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಚೈನಾದ ಲೋನ್​ ಅಪ್ಲಿಕೇಷನ್​ ಕಂಪನಿಗಳೊಂದಿಗೆ ಶಾಮೀಲಾಗಿ ಅಮಾಯಕ ಬಲಿಪಶುಗಳಿಂದ ಹಣವನ್ನು ಸುಲಿಗೆ ಮಾಡಿದರು. ಅವರು ಆಲ್ಬರ್ಟ್​ ಮತ್ತು ಟ್ರೇ ಎಂಬ ಹೆಸರಿನ ಇಬ್ಬರು ಚೀನೀ ಪ್ರಜೆಗಳಿಗೆ 10 ಕೋಟಿ ರೂಪಾಯಿ ಆದಾಯವನ್ನು ನೀಡಿದ್ದರು ಮತ್ತು ಮಾರ್ಚ್​ಲ್ಲಿ 3 ಕೋಟಿ ರೂಪಾಯಿ ಕಮಿಷನ್​ ಆಗಿ ಪಡೆದಿದ್ದರು ಎಂಬುದು ಆಶ್ಚರ್ಯಕರ ಸಂಗತಿಯಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...