ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಮುಂಚೂಣಿ ಸ್ಥಾನವನ್ನ ಕಾಯ್ದುಕೊಳ್ಳುವಲ್ಲಿ ಚೀನಾ ಕಂಪನಿಗಳು ಎಂದಿಗೂ ವಿಫಲವಾಗೋದೇ ಇಲ್ಲ. 79 ಪ್ರತಿಶತ ಚೀನಾ ಮೊಬೈಲ್ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ಭದ್ರವಾಗಿ ತಳವೂರಿವೆ. ಭಾರತದಲ್ಲಿ ವ್ಯಾಪಕವಾಗಿ ಮಾರಾಟವಾಗುವ ಟಾಪ್ 10 ಸ್ಮಾರ್ಟ್ ಫೋನ್ಗಳಲ್ಲಿ 8 ಮೊಬೈಲ್ಗಳು ಚೀನಾ ಕಂಪನಿಯಿಂದ ಬಂದಿವೆ.
ಕೌಂಟರ್ಪಾಯಿಂಟ್ಸ್ ನೀಡಿರುವ ಇತ್ತೀಚಿನ ವರದಿಯ ಪ್ರಕಾರ ಕ್ಸಿಯೋಮಿ ಕಂಪನಿಯು ಭಾರತದ ಸ್ಮಾರ್ಟ್ಪೋನ್ ಮಾರುಕಟ್ಟೆಯಲ್ಲಿ ಮೊದಲ ಸ್ಥಾನವನ್ನು ಪಡೆದಿದೆ. ಇದಾದ ಬಳಿಕ ದಕ್ಷಿಣ ಕೋರಿಯಾದ ಸ್ಯಾಮಸಂಗ್ ಎರಡನೇ ಸ್ಥಾನದಲ್ಲಿದೆ.
ಚೀನಾದ ಕ್ಸಿಯೋಮಿ ಕಂಪನಿಯು ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ 28.4 ಪ್ರತಿಶತ ಪಾಲನ್ನು ಹೊಂದಿದೆ. ಇದಾದ ಬಳಿಕ ಸ್ಯಾಮಸಂಗ್ ಕಂಪನಿ 17.7 ಪ್ರತಿಶತ, ವೀವೋ 15.1 ಪ್ರತಿಶತ ಹಾಗೂ ರಿಯಲ್ ಮೀ 14.6 ಪ್ರತಿಶಯ ಮತ್ತು ಒಪ್ಪೋ ಕಂಪನಿಯು 10.4 ಪ್ರತಿಶತ ಮಾರ್ಕೆಟ್ ಶೇರ್ ಹೊಂದಿವೆ.
ಇನ್ನು 5ಜಿ ಸ್ಮಾರ್ಟ್ಫೋನ್ಗಳ ಬಗ್ಗೆ ಮಾತನಾಡೋದಾದ್ರೆ, ಇಂತಹ ಫೋನ್ಗಳಿಗೆ ಭಾರತದಲ್ಲಿ ಗಣನೀಯ ಪ್ರಮಾಣದಲ್ಲಿ ಬೇಡಿಕೆ ಕೇಳಿ ಬರ್ತಿದೆ. ಈ ವಿಭಾಗದಲ್ಲಿ ರಿಯಲ್ ಮಿ ಕಂಪನಿ ಮೊದಲ ಸ್ಥಾನವನ್ನ ಸಂಪಾದಿಸಿದೆ. ಇದಾದ ಬಳಿಕ ವನ್ ಪ್ಲಸ್ ಕಂಪನಿ 2ನೇ ಸ್ಥಾನದಲ್ಲಿದೆ.