alex Certify 115 ನೇ ಜನ್ಮದಿನ ಆಚರಿಸಿಕೊಂಡ ಅಮೆರಿಕಾದ ಅತ್ಯಂತ ಹಿರಿಯ ವ್ಯಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

115 ನೇ ಜನ್ಮದಿನ ಆಚರಿಸಿಕೊಂಡ ಅಮೆರಿಕಾದ ಅತ್ಯಂತ ಹಿರಿಯ ವ್ಯಕ್ತಿ

ಇಲ್ಲೊಬ್ಬ ವ್ಯಕ್ತಿ ಬಲು ಅಪರೂಪದ ಹುಟ್ಟು ಹಬ್ಬ ಆಚರಿಸಿಕೊಂಡು ವಿಶ್ವದ ಗಮನ ಸೆಳೆದಿದ್ದಾರೆ‌.

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ವಾಸಿಸುವ ಅತ್ಯಂತ ಹಿರಿಯ ವ್ಯಕ್ತಿ ಬೆಸ್ಸಿ ಹೆಂಡ್ರಿಕ್ಸ್ ಎಂಬಾಕೆ ನವೆಂಬರ್ 7 ರಂದು 115 ವರ್ಷಗಳನ್ನು ಪೂರೈಸಿದರು. ಈ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಆಚರಣೆ ನಡೆದಿತ್ತು.

1907ರಲ್ಲಿ ಜನಿಸಿದ ಇವರು ಟೈಟಾನಿಕ್ ಮುಳುಗುವಿಕೆ, ಎರಡು ವಿಶ್ವ ಯುದ್ಧ ಮತ್ತು ತಮ್ಮ ದೇಶದ 21 ಅಧ್ಯಕ್ಷರನ್ನು ಕಂಡಿದ್ದಾರೆ.

110 ವರ್ಷಕ್ಕಿಂತ ಮೇಲ್ಪಟ್ಟ ಜನರನ್ನು ರೆಕಾರ್ಡ್ ಮಾಡುವ ಮತ್ತು ಪ್ರಮಾಣೀಕರಿಸುವ ಜೆರೊಂಟಾಲಜಿ ರಿಸರ್ಚ್ ಗ್ರೂಪ್ ಪ್ರಕಾರ, ಬೆಸ್ಸಿಯು ಯುಎಸ್‌ನ ಅತ್ಯಂತ ಹಿರಿಯ ನಿವಾಸಿ ಮಾತ್ರವಲ್ಲದೆ ವಿಶ್ವದ ನಾಲ್ಕನೇ ಅತ್ಯಂತ ವೃದ್ಧ ವ್ಯಕ್ತಿಯಾಗಿದ್ದಾರೆ.

ಬೆಸ್ಸಿ ತನ್ನ ಮೂರು ಮಕ್ಕಳೊಂದಿಗೆ ಶ್ಯಾಡಿ ಓಕ್ಸ್ ಕೇರ್ ಸೆಂಟರ್‌ನಲ್ಲಿ ತನ್ನ 115 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅವರ ಮಗಳು ಜೋನ್ ಶಾಫರ್ ತನ್ನ ತಾಯಿಯ 115 ನೇ ಹುಟ್ಟುಹಬ್ಬದ ಮೊದಲು 90 ನೇ ವರ್ಷಕ್ಕೆ ಕಾಲಿಟ್ಟರು. “ನಾವು ಇನ್ನೂ ಅವಳನ್ನು ಹೊಂದಿದ್ದೇವೆ ಎಂಬುದು ಅದ್ಭುತವಾಗಿದೆ.” ಎಂದವರು ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ 115 ವರ್ಷ ಮತ್ತು 108 ದಿನಗಳ ವಯಸ್ಸಿನ ಥೆಲ್ಮಾ ಸಟ್‌ಕ್ಲಿಫ್ ನಿಧನರಾದ ಬಳಿಕ ಬೆಸ್ಸಿ ಯುಎಸ್‌ನ ಅತ್ಯಂತ ಹಿರಿಯ ಮಹಿಳೆಯಾದರು.

ಫ್ರಾನ್ಸ್‌ನ ಲುಸಿಲ್ ರಾಂಡನ್ ಪ್ರಸ್ತುತ ಜೀವಂತವಾಗಿರುವ ಅತ್ಯಂತ ಹಿರಿಯ ವ್ಯಕ್ತಿ ಎಂಬ ಲೇಬಲ್ ಹೊಂದಿದ್ದಾರೆ. ಅವರು 118 ವರ್ಷ ವಯಸ್ಸಿನವರು. 119 ವರ್ಷ ವಯಸ್ಸಿನ ಕೇನ್ ತನಕಾ ಅವರ ಮರಣದ ನಂತರ ಅವರು ಅಗ್ರ ಸ್ಥಾನವನ್ನು ಪಡೆದರು.

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ 122 ವರ್ಷಗಳಿಗಿಂತ ಹೆಚ್ಚು ಕಾಲ ಬದುಕಿದ ಜೀನ್ ಲೂಯಿಸ್ ಕಾಲ್ಮೆಂಟ್ ಎಂಬ ಹೆಸರಿನ ಇನ್ನೊಬ್ಬ ಫ್ರೆಂಚ್ ಮಹಿಳೆ ಅತ್ಯಂತ ಹಿರಿಯ ವ್ಯಕ್ತಿ, ಕಾಲ್ಮೆಂಟ್ 1997 ರಲ್ಲಿ ನಿಧನರಾದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...