alex Certify ಬೆಂಗಳೂರಿನ ಮಾವು ಮತ್ತು ಹಲಸು ಮೇಳಕ್ಕೆ ನೀರಸ ಪ್ರತಿಕ್ರಿಯೆ; ರೈತರ ಮನವಿ ಮೇರೆಗೆ ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿನ ಮಾವು ಮತ್ತು ಹಲಸು ಮೇಳಕ್ಕೆ ನೀರಸ ಪ್ರತಿಕ್ರಿಯೆ; ರೈತರ ಮನವಿ ಮೇರೆಗೆ ವಿಸ್ತರಣೆ

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ಬೆಂಗಳೂರಿನ ಲಾಲ್‌ಬಾಗ್ ಸಸ್ಯೋದ್ಯಾನದಲ್ಲಿ ಆಯೋಜಿಸಿರುವ ವಾರ್ಷಿಕ ಮಾವು ಮತ್ತು ಹಲಸು ಮೇಳಕ್ಕೆ ನಿರಾಶದಾಯಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗ್ರಾಹಕರು ಮತ್ತು ಸಂದರ್ಶಕರ ಕೊರತೆಯಿಂದಾಗಿ ಈ ವರ್ಷ ವ್ಯಾಪಾರ ನಿರಾಶೆಯಾಗಿದೆ.

ಕೋವಿಡ್ ನಿರ್ಬಂಧಗಳಿಂದಾಗಿ 2020 ಮತ್ತು 2021 ರಲ್ಲಿ ಸ್ಥಗಿತಗೊಂಡಿದ್ದ ಮೇಳವನ್ನ ಕಳೆದ ವರ್ಷ ಆಯೋಜಿಸಲಾಗಿತ್ತು. ಸಾಮಾನ್ಯವಾಗಿ ಮೇ ತಿಂಗಳಲ್ಲಿ ಮೇಳ ನಡೆಯುತ್ತದೆ. ಆದರೆ ಈ ವರ್ಷ ಮಾವು ಮತ್ತು ಹಲಸು ಮೇಳ ಗ್ರಾಹಕರ ಗಮನ ಸೆಳೆಯುವಲ್ಲಿ ವಿಫಲವಾಗಿದೆ. ಜೂನ್ 2 ರಂದು ಪ್ರಾರಂಭವಾದ ಮೇಳವು ಜೂನ್ 11 ರಂದು ಮುಕ್ತಾಯವಾಗಬೇಕಿತ್ತು. ಆದರೆ ವ್ಯಾಪಾರ ಚೆನ್ನಾಗಿಲ್ಲ ಎಂದು ದೂರಿದ ರೈತರ ಮನವಿಯ ಮೇರೆಗೆ ಜೂನ್ 21 ರವರೆಗೆ ವಿಸ್ತರಿಸಲಾಗಿದೆ.

ಈ ವರ್ಷ ಸಂದರ್ಶಕರು ಮತ್ತು ಗ್ರಾಹಕರ ಸಂಖ್ಯೆ ಶೇಕಡಾ 50 ರಷ್ಟು ಕಡಿಮೆಯಾಗಿದೆ ಎಂದು ರೈತರು ವರದಿ ಮಾಡಿದ್ದಾರೆ. ಮಾವು ಮಾರಾಟದ ಕೊರತೆಯಿಂದಾಗಿ ಮಾವಿನಹಣ್ಣಿನ ಪೆಟ್ಟಿಗೆಗಳನ್ನು ಎಸೆಯುವ ಪರಿಸ್ಥಿತಿ ಉಂಟಾಗಿದೆ ಎಂದು ಬೇಸರ ಹೊರಹಾಕಿದ್ದಾರೆ.

ಮೇ ತಿಂಗಳಿನಲ್ಲಿ ನಡೆದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮೇಳ ನಡೆಸಲು ವಿಳಂಬವಾಗಿದೆ. ಫಲಪುಷ್ಪ ಮೇಳದ ಬಗ್ಗೆ ರಾಜ್ಯ ಬೆಂಬಲವೂ ಅಸಮರ್ಪಕವಾಗಿರುವುದು ಆಸಕ್ತಿ ಕಡಿಮೆಯಾಗಲು ಕಾರಣ ಎನ್ನಲಾಗಿದೆ.

ಸಾಮಾನ್ಯವಾಗಿ ಸಕ್ಕರಗುತ್ತಿ, ಮಾಲ್ಗೋವಾ, ಬಂಗನಪಲ್ಲಿ, ಕಾಲಪಾಡ್ ಮುಂತಾದ ವಿವಿಧ ತಳಿಯ ಮಾವುಗಳ ಸ್ಟಾಲ್‌ಗಳನ್ನು ಹಾಕಲು ಮತ್ತು ಮಾರಾಟ ಮಾಡಲು ರಾಜ್ಯದ ಎಲ್ಲೆಡೆಯಿಂದ ರೈತರು ಮೇಳಕ್ಕೆ ಬರುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...