alex Certify ಮದುವೆಯಾದ 3 ವರ್ಷದ ನಂತ್ರ ಗೊತ್ತಾಯ್ತು ಪತಿಯ `ಆ’ ಸಂಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ 3 ವರ್ಷದ ನಂತ್ರ ಗೊತ್ತಾಯ್ತು ಪತಿಯ `ಆ’ ಸಂಗತಿ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಮದುವೆಯಾದ ಮೂರು ವರ್ಷಗಳ ನಂತರ, ಮಹಿಳೆ ತನ್ನ ಗಂಡ ಸಲಿಂಗಕಾಮಿ ಎಂಬುದು ತಿಳಿದಿದೆ. ವ್ಯಕ್ತಿ ತನ್ನ ಕುಟುಂಬದ ಸದಸ್ಯರ ಒತ್ತಾಯದ ಮೇರೆಗೆ ಮದುವೆಯಾಗಿದ್ದನು. ಆದ್ರೆ ಮೂರು ವರ್ಷಗಳ ಕಾಲ ಪತ್ನಿಯಿಂದ ದೂರವಿದ್ದ ಪತಿ ಮೇಲೆ ಪತ್ನಿಗೆ ಅನುಮಾನ ಬಂದಿತ್ತು. ಫೋನ್ ಚೆಕ್ ಮಾಡಿದಾಗ ಸತ್ಯ ಹೊರಬಿದ್ದಿದೆ.

28 ವರ್ಷದ ಮಹಿಳೆ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಸಲಿಂಗಕಾಮಿ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಪತಿಯ ಪ್ರೊಫೈಲ್ ನೋಡಿದ ನಂತರ ಮಹಿಳೆ, ಗಂಡನಿಂದ ವಿಚ್ಛೇದನ ನೀಡಲು ಮುಂದಾಗಿದ್ದಾಳೆ. ಸಹಾಯವಾಣಿಗೆ ದೂರು ನೀಡಿದ ನಂತ್ರ ಬಸವನಗುಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

2018ರಂದು ಇಬ್ಬರ ಮದುವೆ ನಡೆದಿತ್ತು. ಪತಿಗೆ ಇದು ಎರಡನೇ ಮದುವೆಯಾಗಿತ್ತು. ಮದುವೆ ವೇಳೆ ಈ ಸಂಗತಿಯನ್ನು ಮುಚ್ಚಿಟ್ಟಿದ್ದರಂತೆ. ಮದುವೆ ನಂತ್ರ ಪತ್ನಿಯಿಂದ ದೂರವಿರಲು ಶುರು ಮಾಡಿದ್ದ ವ್ಯಕ್ತಿ, ಮೊದಲ ಪತ್ನಿ ಮೋಸ ಮಾಡಿದ್ದಾಳೆ. ಅದ್ರಿಂದ ಹೊರಬರಲು ಯತ್ನಿಸುತ್ತಿದ್ದೇನೆ ಎನ್ನುತ್ತಿದ್ದನಂತೆ. ನಂತ್ರ ಪತ್ನಿ ಮೇಲೆ ಅನವಶ್ಯಕ ಕೂಗಾಡಿ, ಗಲಾಟೆ ಮಾಡ್ತಿದ್ದನಂತೆ. ಲಾಕ್ ಡೌನ್ ಸಂದರ್ಭದಲ್ಲಿ ಪತಿ ಮೇಲೆ ಅನುಮಾನಗೊಂಡ ಪತ್ನಿ, ಮೊಬೈಲ್ ಚಕ್ ಮಾಡಿದ್ದಾಳೆ. ಆಗ ಗೇ ಅಪ್ಲಿಕೇಷನ್ ನಲ್ಲಿ ಪತಿ ಪ್ರೊಫೈಲ್ ನೋಡಿದ್ದಾಳೆ. ನಂತ್ರ ದೂರವಾಗುವ ನಿರ್ಧಾರ ಕೈಗೊಂಡಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...