alex Certify ಪಬ್ ​​ನಲ್ಲಿ ಮದ್ಯ​ ಆರ್ಡರ್​ ಮಾಡಿ ಮುಖ ಸುಟ್ಟುಕೊಂಡ ಮಹಿಳೆ…! ಕೋರ್ಟ್‌ ಮೆಟ್ಟಿಲೇರಿದಾಕೆಗೆ ಕೊನೆಗೂ ಸಿಕ್ತು ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಬ್ ​​ನಲ್ಲಿ ಮದ್ಯ​ ಆರ್ಡರ್​ ಮಾಡಿ ಮುಖ ಸುಟ್ಟುಕೊಂಡ ಮಹಿಳೆ…! ಕೋರ್ಟ್‌ ಮೆಟ್ಟಿಲೇರಿದಾಕೆಗೆ ಕೊನೆಗೂ ಸಿಕ್ತು ಪರಿಹಾರ

ಬಾರ್​ ಒಂದರಲ್ಲಿ ಮುಖ ಸುಟ್ಟುಕೊಂಡಿದ್ದ 28 ವರ್ಷದ ಮಹಿಳೆಯೊಬ್ಬರು ಕಾನೂನು ಹೋರಾಟದ ಬಳಿಕ 74 ಸಾವಿರ ರೂಪಾಯಿ ಪರಿಹಾರವನ್ನು ಪಡೆದಿದ್ದಾರೆ. ಬೆಂಗಳೂರಿನ ಕೊಮ್ಯೂನಿಟಿ’ ಎಂಬ ಬಾರ್​ನಲ್ಲಿ ಜ್ವಾಲೆ ಆಧಾರಿತ ಮದ್ಯವನ್ನು ಮಹಿಳೆ ಆರ್ಡರ್​ ಮಾಡಿದ್ದರು.

ರೆಸಿಡೆನ್ಸಿ ರಸ್ತೆಯ ಪಬ್​ ಒಂದಕ್ಕೆ ತನ್ನ ಮೂವರು ಸ್ನೇಹಿತರ ಜೊತೆಯಲ್ಲಿ ಈ ಮಹಿಳೆ 2019ರ ಫೆಬ್ರವರಿ 15ರಂದು ಭೇಟಿ ನೀಡಿದ್ದರು. ಇದೇ ದಿನದಂದು ಈ ಘಟನೆ ಸಂಭವಿಸಿತ್ತು.

ಅಕ್ಷಯನಗರ ನಿವಾಸಿಯಾದ ಮಹಿಳೆಗೆ ಪಬ್​​ನ ಸಿಬ್ಬಂದಿ ಜ್ವಾಲೆ ಆಧಾರಿತ ಮದ್ಯವನ್ನು ಆರ್ಡರ್​ ಮಾಡುವಂತೆ ಪ್ರೇರೇಪಿಸಿದ್ದರು. ಹೀಗಾಗಿ ಇದೇ ಪಾನೀಯವನ್ನು ಮಹಿಳೆ ಆರ್ಡರ್​ ಮಾಡಿದ್ದರು. ಬಳಿಕ ಅದನ್ನು ಮಹಿಳೆಯ ಬಾಯಿಗೆ ಸುರಿಯಲಾಗಿತ್ತು.

ಆದರೆ ಪಾನೀಯ ಬಾಯಿಗೆ ಬೀಳುತ್ತಿದ್ದಂತೆಯೇ ಆಕೆ ಸುಟ್ಟ ಗಾಯಗಳಿಂದ ಬಳಲಿದ್ದಾಳೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮಹಿಳೆಯು 2019ರ ನವೆಂಬರ್​ ತಿಂಗಳಲ್ಲಿ ಬೆಂಗಳೂರಿನ ಗ್ರಾಹಕ ಕೋರ್ಟ್​ನಲ್ಲಿ ದೂರನ್ನು ದಾಖಲಿಸಿದ್ದರು.

ಪಬ್​ ಸಿಬ್ಬಂದಿಯಿಂದ ಆದ ನಿರ್ಲಕ್ಷ್ಯದಿಂದ ನನಗೆ ಹಾನಿ ಉಂಟಾಗಿದ್ದು ಹೀಗಾಗಿ 20 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಮಹಿಳೆ ಆಗ್ರಹಿಸಿದ್ದರು. ಮಹಿಳೆಯ ಪರ ವಕೀಲ ಆಸ್ಪತ್ರೆಯ ವರದಿ ಸೇರಿದಂತೆ ಎಲ್ಲಾ ದಾಖಲೆಗಳನ್ನು ಕೋರ್ಟ್​ಗೆ ಒದಗಿಸಿದ್ದರು.

ಆದರೆ ಪಬ್​​ ಪರ ಹಾಜರಾದ ವಕೀಲರು ಈ ಮಹಿಳೆಯು ತನ್ನ ಸ್ವ ಇಚ್ಛೆಯಿಂದ ಈ ಪಾನೀಯನ್ನು ಆರ್ಡರ್​ ಮಾಡಿದ್ದಾರೆ. ಹಾಗೂ ತಾನಾಗಿಯೇ ಈ ಪಾನೀಯವನ್ನು ಕುಡಿದಿದ್ದಾರೆ. ಹೀಗಾಗಿ ಪಬ್​ನ ಯಾವುದೇ ಸಿಬ್ಬಂದಿ ಈ ಘಟನೆಗೆ ಜವಾಬ್ದಾರರಲ್ಲ ಎಂದು ವಾದಿಸಿದ್ದರು.

ವಾದ – ವಿವಾದವನ್ನು ಆಲಿಸಿದ ಗ್ರಾಹಕ ನ್ಯಾಯಾಲಯವು, ಮಹಿಳೆಯ ವೈದ್ಯಕೀಯ ವೆಚ್ಚ ಸೇರಿದಂತೆ ವಿವಿಧ ಲೆಕ್ಕಾಚಾರಗಳನ್ನು ಸೇರಿಸಿ ಪಬ್​ ಮಾಲೀಕರು 74 ಸಾವಿರ ರೂಪಾಯಿಗಳನ್ನು ಪರಿಹಾರ ರೂಪದಲ್ಲಿ ನೀಡಬೇಕು ಎಂದು ಆದೇಶಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...