alex Certify ಬೈಸಿಕಲ್ ಕಳ್ಳತನಕ್ಕೆ ಇಳಿದ ಬೆಂಗಳೂರು ಕಳ್ಳರು, ಸಿಸಿ ಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಕೈಚಳಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಸಿಕಲ್ ಕಳ್ಳತನಕ್ಕೆ ಇಳಿದ ಬೆಂಗಳೂರು ಕಳ್ಳರು, ಸಿಸಿ ಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಕೈಚಳಕ…!

ಮನೆ ಮುಂದೆ ನಿಲ್ಲಿಸಿದ್ದ ಬೈಸಿಕಲ್ ಗಳು ಕಳ್ಳತನವಾಗಿರುವ ಘಟನೆ ಬೆಂಗಳೂರಿನ, ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ‌ ನಡೆದಿದೆ. ಇಂದು ವಸಂತನಗರದ ಒಂದೇ ಏರಿಯಾದಲ್ಲಿ ಎರಡು ಬೆಲೆಬಾಳುವ ಸೈಕಲ್ ಗಳ ಕಳ್ಳತನವಾಗಿದೆ. ಮುಂಜಾನೆ ಮಬ್ಬು ಬೆಳಕಿನಲ್ಲಿ ಬಂದ ಖದೀಮರು ಸೈಕಲ್ ಗಳನ್ನ ಕಳ್ಳತನ ಮಾಡಿದ್ದಾರೆ.

ಎರಡೂ ಲಸಿಕೆ ಪಡೆದರೂ ಮೈಮರೆಯುವಂತಿಲ್ಲ; ಆಘಾತಕಾರಿ ವರದಿ ಬಹಿರಂಗ

ಸಿನಿಮೀಯ ರೀತಿಯಲ್ಲಿ ಕಳ್ಳತನ ಮಾಡಿರುವ ಕಳ್ಳರು, ಮೊದಲು ಇಡೀ ಏರಿಯಾವನ್ನು ಸುತ್ತಿ, ಸೈಕಲ್ ಗಳಿರುವ ಮನೆಗಳನ್ನ ಟಾರ್ಗೆಟ್ ಮಾಡಿದ್ದಾರೆ. ನಂತರ ಮುಂಜಾನೆ ಬಂದು ಎರಡು ಬೈಸಿಕಲ್ ಗಳನ್ನ ಕದ್ದೊಯ್ದಿದ್ದಾರೆ.

ಮನೆ ಕಾಂಪೌಂಡ್ ಜಂಪ್ ಮಾಡಿ, ಸೈಕಲ್ ಕಳವು ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ. ಸಿಸಿ ಟಿವಿಯಲ್ಲಿ ಬೈಸಿಕಲ್ ಕಳ್ಳತನದ ದೃಶ್ಯ ಸೆರೆಯಾಗಿದ್ದು, ಇಬ್ಬರು ಕಳ್ಳರ ಚಲನವಲನದ ಸಂಪೂರ್ಣ ದೃಶ್ಯಾವಳಿಗಳು ಲಭ್ಯವಾಗಿವೆ‌. ಸೈಕಲ್ ಕಳೆದುಕೊಂಡವರು ಹೈಗೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...