ಹಿಂದೂಸ್ತಾನ್ ಕಂಪ್ಯೂಟರ್ಸ್ ಲಿಮಿಟೆಡ್ (HCL) ನಲ್ಲಿ ಉದ್ಯೋಗಿಯಾಗಿದ್ದ ಬೆಂಗಳೂರಿನ ಮಾಜಿ ಟೆಕ್ಕಿಯೊಬ್ಬರು ಜಾವಾ ಡೆವಲಪರ್ ಆಗಿ ಹೊಸ ಉದ್ಯೋಗವನ್ನು ಪಡೆಯಲು ರಾಪಿಡೋ ಬೈಕ್ ಟ್ಯಾಕ್ಸಿಯನ್ನು ಓಡಿಸುತ್ತಿದ್ದಾರೆ.
ತನ್ನ ಹಿಂದಿನ ಕೆಲಸದಿಂದ ವಜಾಗೊಂಡಿರುವ ಅವರು ತನ್ನ ಗುರಿಗಳನ್ನು ಪೂರೈಸಲು ಮತ್ತು ಹೊಸ ಕೆಲಸದ ಹುಡುಕಾಟಕ್ಕೆ ಇತರೆ ಟೆಕ್ಕಿಗಳನ್ನು ಹುಡುಕಲು ಬೈಕ್ ಟ್ಯಾಕ್ಸಿ ಡ್ರೈವರ್ ಆಗಿ ಮಾರ್ಪಟ್ಟಿದ್ದಾರಂತೆ.
ಲೊವ್ನೀಶ್ ಧೀರ್ ಎಂಬ ವ್ಯಕ್ತಿ ಇತ್ತೀಚೆಗೆ ರಾಪಿಡೋ ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ಟೆಕ್ಕಿಯ ವಿಷಯವನ್ನ ಹಂಚಿಕೊಂಡಿದ್ದಾರೆ. “ನನ್ನ ರ್ಯಾಪಿಡೋ ಬೈಕ್ ಡ್ರೈವರ್ ಜಾವಾ ಡೆವಲಪರ್ ಆಗಿದ್ದಾರೆ. ಜಾವಾ ಡೆವಲಪರ್ ಓಪನಿಂಗ್‌ಗಳಿಗಾಗಿ HCL ಕಂಪನಿ ತೊರೆದು ರ್ಯಾಪಿಡೋ ಡ್ರೈವಿಂಗ್ ಮಾಡ್ತಿದ್ದಾರೆ. ನನ್ನ ಬಳಿ ಅವರ ಸಿವಿ ಇದೆ. ಜಾವಾ ಡೆವಲಪರ್ ಉದ್ಯೋಗದ ಮಾಹಿತಿಯಿದ್ದರೆ ನೀವು ನನಗೆ ಮೆಸೇಜ್ ಮಾಡಿ ” ಎಂದು ಟ್ವೀಟ್ ಮಾಡಿದ್ದಾರೆ.
ಐಟಿ ರಾಜಧಾನಿ ಬೆಂಗಳೂರಲ್ಲಿ ಇಂತಹ ನಿದರ್ಶನಗಳು ತುಂಬಾ ಸಾಮಾನ್ಯವಲ್ಲ. ಏಕೆಂದರೆ ನಗರವು ಲಕ್ಷಗಟ್ಟಲೆ ಟೆಕ್ಕಿಗಳಿಗೆ ನೆಲೆಯಾಗಿದೆ ಮತ್ತು ವಜಾಗೊಳಿಸಿದ ಉದ್ಯೋಗಿಗೆ ಸಹಾಯ ಮಾಡಲು ಸಾಮಾಜಿಕ ಬಳಕೆದಾರರು ಒಗ್ಗೂಡುತ್ತಾರೆ.