ಬೆಂಗಳೂರು ಮೂಲದ ತಂತ್ರಜ್ಞಾನ ತಜ್ಞ ಹಾಗೂ ಭಾರತದ ರಿಟೂಲ್ ಗ್ರೌಥ್ ಮುಖ್ಯಸ್ಥ ಸಿದ್ ಪುರಿ ಸ್ಯಾನ್ಫ್ರಾನ್ಸಿಸ್ಕೋದಲ್ಲಿ ಗೂ್ಗಲ್ ಹಾಗೂ ಆಲ್ಫಾಬೆಟ್ ಸಿಇಓ ಸುಂದರ್ ಪಿಚೈರನ್ನು ಭೇಟಿಯಾಗಿದ್ದಾರೆ. ಪುರಿ ಇಬ್ಬರು ಜೊತೆಯಾಗಿ ತೆಗೆಸಿದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಈ ಫೋಟೋ ಸಖತ್ ವೈರಲ್ ಆಗಿದೆ.
ಈ ಫೋಟೋದಲ್ಲಿ ಸುಂದರ್ ಪಿಚ್ಚೈ ಕ್ಯಾಶುವಲ್ ಉಡುಪು ಧರಿಸಿರೋದನ್ನು ಕಾಣಬಹುದಾಗಿದೆ. ನೀಲಿ ಬಣ್ಣದ ಜೀನ್ಸ್ ಹಾಗೂ ಜಾಕೆಟ್ ಜೊತೆಯಲ್ಲಿ ಕಪ್ಪು ಬಣ್ಣದ ಸನ್ಗ್ಲಾಸ್ನ್ನು ಸುಂದರ್ ಪಿಚ್ಚೈ ಧರಿಸಿದ್ದಾರೆ. ಅಲ್ಲದೇ ಇಷ್ಟು ದೊಡ್ಡ ಹುದ್ದೆಯಲ್ಲಿರುವ ಸುಂದರ್ ಪಿಚ್ಚೈ ಸುತ್ತ ಯಾವುದೇ ಭದ್ರತಾ ಸಿಬ್ಬಂದಿ ಇಲ್ಲದೇ ಇರೋದನ್ನ ಸಹ ಫೋಟೋದಲ್ಲಿ ಗಮನಿಸಬಹುದಾಗಿದೆ. ಪುರಿ ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದು ಸುಂದರ್ಪಿಚ್ಚೈರ ಭದ್ರತಾ ಸಿಬ್ಬಂದಿಯೇ ನಮ್ಮ ಫೋಟೋ ಕ್ಲಿಕ್ಕಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಫೋಟೋವನ್ನು ಪುರಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಂತೆಯೇ ಲೈಕ್ ಹಾಗೂ ಕಮೆಂಟ್ಗಳ ಸುರಿಮಳೆಯೇ ಹರಿದಿದೆ. ಅಂದಹಾಗೆ ಸುಂದರ್ ಪಿಚ್ಚೈ ಮೂಲತಃ ಭಾರತದವರಾಗಿದ್ದು ಗೂಗಲ್ ಹಾಗೂ ಅದರ ಮಾತೃಸಂಸ್ಥೆ ಆಲ್ಫಾಬೆಟ್ನ ಸಿಇಓ ಆಗಿದ್ದಾರೆ.
ಸುಂದರ್ ಪಿಚೈ, ಮೂಲತಃ ಭಾರತದವರು, ಗೂಗಲ್ ಮತ್ತು ಅದರ ಮಾತೃ ಸಂಸ್ಥೆ ಆಲ್ಫಾಬೆಟ್ ಎರಡರ ಗೌರವಾನ್ವಿತ CEO ಆಗಿದ್ದಾರೆ. 2022 ರಲ್ಲಿ, ಪಿಚೈ ಅವರು ಸುಮಾರು $226 ಮಿಲಿಯನ್ ನಷ್ಟು ಪ್ರಭಾವಶಾಲಿ ಒಟ್ಟು ಪರಿಹಾರ ಪ್ಯಾಕೇಜ್ ಅನ್ನು ಪಡೆದರು, ಜಾಗತಿಕವಾಗಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕಾರ್ಪೊರೇಟ್ ನಾಯಕರಲ್ಲಿ ಅವರೂ ಒಬ್ಬರು.