alex Certify ಮೈಸೂರು ಪ್ರವಾಸದ ವೇಳೆ ಅರ್ಧಕ್ಕೆ ಬಿಟ್ಟು ಹೋದ ಓಲಾ ಕ್ಯಾಬ್ ಚಾಲಕ; ಭಯಾನಕ ಕಥನ ಬಿಚ್ಚಿಟ್ಟ ಬೆಂಗಳೂರಿನ ವ್ಯಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈಸೂರು ಪ್ರವಾಸದ ವೇಳೆ ಅರ್ಧಕ್ಕೆ ಬಿಟ್ಟು ಹೋದ ಓಲಾ ಕ್ಯಾಬ್ ಚಾಲಕ; ಭಯಾನಕ ಕಥನ ಬಿಚ್ಚಿಟ್ಟ ಬೆಂಗಳೂರಿನ ವ್ಯಕ್ತಿ

Twitter Erupts Bengaluru Man Abandoned Ola Cab Midway Trip To Mysore Viral  Incident Vikas Loanಬೆಂಗಳೂರು: ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳನ್ನು ಬುಕ್ ಮಾಡುವಾಗ ಮತ್ತು ಪ್ರಯಾಣಿಸುವಾಗ ಕೆಲವರು ಕಹಿ ಅನುಭವಗಳನ್ನು ಹೊಂದಿರಬಹುದು. ಬಹಳ ತುರ್ತು ಕೆಲಸ ಇರುವಾಗ ಕ್ಯಾಬ್ ಅನ್ನು ಕ್ಯಾನ್ಸಲ್ ಮಾಡುವುದರಿಂದ ಹಿಡಿದು ಪಾವತಿ ಸಂಬಂಧಿತ ಸಮಸ್ಯೆಗಳವರೆಗೆ, ಪಟ್ಟಿಯು ಗ್ರೇಟ್ ವಾಲ್ ಆಫ್ ಚೀನಾಕ್ಕಿಂತ ದೊಡ್ಡದಾಗಿರುತ್ತದೆ. ಅಂದಹಾಗೆ, ಬೆಂಗಳೂರಿನ ವಿಕಾಸ್ ಗೌಡ ಎಂಬ ಟ್ವಿಟ್ಟರ್ ಬಳಕೆದಾರರು ಹಂಚಿಕೊಂಡ ಅನುಭವವು ಅಕ್ಷರಶಃ ಭೀತಿ ಮೂಡಿಸುತ್ತದೆ.

ಓಲಾ ಕ್ಯಾಬ್ ನ ತಮ್ಮ ಅನುಭವವನ್ನು ವಿಕಾಸ್ ಮೈಕ್ರೋ-ಬ್ಲಾಗಿಂಗ್ ಸೈಟ್‌ನಲ್ಲಿ ಹಂಚಿಕೊಂಡಿದ್ದಾರೆ. ಪೋಷಕರೊಂದಿಗೆ ಮೈಸೂರಿಗೆ ಪ್ರವಾಸವನ್ನು ಬುಕ್ ಮಾಡಲಾಗಿತ್ತು. ಈ ಪ್ರವಾಸಕ್ಕೆ ಕೆಲ ರೌಡಿಗಳು ತಮ್ಮ ದ್ವಿಚಕ್ರ ವಾಹನಗಳಲ್ಲಿ ಬಂದು ದಿಗ್ಬಂಧನ ಸೃಷ್ಟಿಸಿದ್ದಾರೆ. ಈ ರೌಡಿಗಳು/ಕಲೆಕ್ಷನ್ ಏಜೆಂಟ್‌ಗಳು ಚಾಲಕನಿಗೆ ಹಿಂದಿನ ಕಂತುಗಳನ್ನು ಆ ಕ್ಷಣದಲ್ಲಿಯೇ ಪಾವತಿಸುವಂತೆ ಬೆದರಿಕೆ ಹಾಕಿದ್ದಾರೆ. ಹಣ ಪಾವತಿಸದಿದ್ದಲ್ಲಿ ಅವರು ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಈ ಗಲಾಟೆ ನಡೆಯುತ್ತಿರುವಾಗ ವಿಕಾಸ್, ಕ್ಯಾಬ್ ಕಂಪನಿ ಒದಗಿಸಿದ ತುರ್ತು ಸಹಾಯವಾಣಿ ಸಂಖ್ಯೆಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರೂ ವ್ಯರ್ಥವಾಯಿತು. ಕಸ್ಟಮರ್ ಕೇರ್ ಏಜೆಂಟ್ ವಿಕಾಸ್‌ಗೆ ಪರಿಸ್ಥಿತಿಯನ್ನು ಪರಿಹರಿಸುವ ಬದಲು ಮತ್ತೊಂದು ಕ್ಯಾಬ್ ಅನ್ನು ಬುಕ್ ಮಾಡಿ ತನ್ನ ಪ್ರಯಾಣವನ್ನು ಪೂರ್ಣಗೊಳಿಸಲು ಸಲಹೆ ನೀಡಿದ್ದಾರೆ.

ಅಷ್ಟೆ ಅಲ್ಲ…… ವಿಕಾಸ್ ಗೆ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಯಿತು. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಅವರು ಸವಿವರವಾಗಿ ಹಂಚಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಓಲಾ ಕ್ಯಾಬ್ಸ್ ಪ್ರತಿಕ್ರಿಯಿಸಿದ್ದು, ಕಾಮೆಂಟ್‌ ವಿಭಾಗದಲ್ಲಿ ಕ್ಷಮೆಯಾಚಿಸಿದೆ. ನೀವು ಮತ್ತು ನಿಮ್ಮ ಕುಟುಂಬದವರು ಸುರಕ್ಷಿತವಾಗಿ ಮನೆಗೆ ತಲುಪಿದ್ದೀರಿ ಎಂದು ನಾವು ಭಾವಿಸುತ್ತೇವೆ. ಇದು ಎಷ್ಟು ಅಸಮಾಧಾನವನ್ನು ಉಂಟುಮಾಡುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ನೀವು ಈಗಾಗಲೇ ಅಗತ್ಯವಿರುವ ವಿವರಗಳನ್ನು ಹಂಚಿಕೊಂಡಿರುವುದರಿಂದ, ಯಾವುದೇ ವಿಳಂಬವಿಲ್ಲದೆ ಸಂಬಂಧಿತ ತಂಡವು ಸಹಾಯದೊಂದಿಗೆ ನಿಮ್ಮನ್ನು ತಲುಪುತ್ತದೆ ಎಂದು ಓಲಾ ಕ್ಯಾಬ್ಸ್ ಪ್ರತಿಕ್ರಿಯಿಸಿದೆ.

ಆದರೆ, ನೆಟ್ಟಿಗರು ಮಾತ್ರ ಕ್ಷಮೆ ಸ್ವೀಕರಿಸಲು ನಿರಾಕರಿಸಿದ್ದಾರೆ. ಅನೇಕರು ತಮ್ಮದೇ ಆದ ಭಯಾನಕ ಪ್ರವಾಸದ ಅನುಭವಗಳೊಂದಿಗೆ ಕಾಮೆಂಟ್‌ ಪೆಟ್ಟಿಗೆಯನ್ನು ತುಂಬಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...