ಆಹಾರ ಸೇವಿಸುತ್ತಿರುವ ವೇಳೆಯಲ್ಲಿ ಸತ್ತ ಹುಳವೇನಾದರೂ ಸಿಕ್ಕಿಬಿಟ್ಟರೆ ಅದಕ್ಕಿಂತ ಗಲೀಜು ಎನ್ನಿಸುವ ಪ್ರಸಂಗ ಇನ್ನೊಂದಿಲ್ಲ. ಇಂತದ್ದೇ ಒಂದು ಪ್ರಕರಣದಲ್ಲಿ ನೊಂದ ಗ್ರಾಹಕನಿಗೆ ಗೆಲುವು ಸಿಕ್ಕಿದ್ದು ನ್ಯಾಯಾಲಯವು 55 ಸಾವಿರ ರೂಪಾಯಿ ಗ್ರಾಹಕನಿಗೆ ನೀಡುವಂತೆ ಆದೇಶ ನೀಡಿದೆ.
ರೇಪ್ ವಿಡಿಯೋ ತೋರಿಸಿ ವಿದ್ಯಾರ್ಥಿನಿ ಮೇಲೆ ಯೋಗ ಶಿಕ್ಷಕನಿಂದ ಪದೇ ಪದೇ ಅತ್ಯಾಚಾರ
ಅಂದಹಾಗೆ ಈ ಪ್ರಕರಣ ನಡೆದಿದ್ದು 2016ರಲ್ಲಿ. 2016ರ ಸೆಪ್ಟೆಂಬರ್ 15ರಂದು ಬೆಂಗಳೂರಿನ ಗಾಂಧಿ ನಗರದಲ್ಲಿರುವ ಕಾಮತ್ ಹೋಟೆಲಿನಲ್ಲಿ ಗ್ರಾಹಕರೊಬ್ಬರು ಜಾಮೂನ್ ಆರ್ಡರ್ ಮಾಡಿದ್ದರು. ಆದರೆ ಹೋಟೆಲ್ ನೀಡಿದ ಜಾಮೂನಿನಲ್ಲಿ ಸತ್ತ ಜಿರಳೆ ಕೂಡ ಕಂಡು ಬಂದಿತ್ತು. ಈ ಗ್ರಾಹಕನ ಸ್ನೇಹಿತರಾಗಿದ್ದ ಕೆ.ಎಂ. ರಾಜಣ್ಣ ಕೂಡ ಈ ಘಟನೆಗೆ ಸಾಕ್ಷಿಯಾಗಿದ್ದರು.
ʼಆಂಡ್ರಾಯ್ಡ್ʼ ಬಳಕೆದಾರರೇ ಎಚ್ಚರ..! ನಿಮ್ಮ ಖಾಸಗಿ ಮಾಹಿತಿ ಸೋರಿಕೆ ಮಾಡುತ್ತಿವೆ ಈ ಅಪ್ಲಿಕೇಶನ್ಸ್
ಇದಾದ ಬಳಿಕ ರಾಜಣ್ಣ ನ್ಯಾಯಕ್ಕಾಗಿ ಜಿಲ್ಲಾ ಗ್ರಾಹಕರ ವೇದಿಕೆಯ ಮೆಟ್ಟಿಲೇರಿದ್ದಾರೆ. ಪ್ರಕರಣ ಸಂಬಂಧ ಗ್ರಾಹಕರ ವೇದಿಕೆಯಿಂದ ಕಾಮತ್ ಹೋಟೆಲ್ ಗೆ ನೋಟಿಸ್ ಕೂಡ ನೀಡಲಾಗಿತ್ತು. ಆದರೆ ಬರೋಬ್ಬರಿ 2 ವರ್ಷಗಳ ಕಾಲ ಕಾಮತ್ ಹೋಟೆಲ್ನ ಪರವಾಗಿ ಯಾರೊಬ್ಬರೂ ವಿಚಾರಣೆಗೆ ಹಾಜರಾಗದೇ ರಾಜಣ್ಣ ಹಾಗೂ ಅವರ ಸ್ನೇಹಿತರನ್ನು ಸತಾಯಿಸಲಾಗಿತ್ತು. ಸಂತ್ರಸ್ತ ರಾಜಣ್ಣಗೆ ಜಿಲ್ಲಾ ಗ್ರಾಹಕರ ವೇದಿಕೆಯು ಪರಿಹಾರದ ರೂಪದಲ್ಲಿ 55 ಸಾವಿರ ರೂಪಾಯಿ ದಂಡ ಪಾವತಿಸುವಂತೆ ಸೂಚನೆ ನೀಡಿತ್ತು.
ಇಷ್ಟಕ್ಕೆ ಸುಮ್ಮನಾಗದ ಕಾಮತ್ ಹೋಟೆಲ್ ಜಿಲ್ಲಾ ಗ್ರಾಹಕರ ವೇದಿಕೆಯ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಆದರೆ ಇಲ್ಲೂ ಕೂಡ ನ್ಯಾಯಾಧೀಶರು ಜಿಲ್ಲಾ ಗ್ರಾಹಕರ ವೇದಿಕೆಯ ಆದೇಶವನ್ನೇ ಎತ್ತಿ ಹಿಡಿದಿದ್ದು ಈ ಮೂಲಕ ಕಾಮತ್ ಹೋಟೆಲ್ಗೆ ಹಿನ್ನಡೆಯಾಗಿದೆ.