alex Certify BIG NEWS: ರಾಜ್ಯದಲ್ಲಿಂದು ಕೊರೋನಾ ಭಾರಿ ಹೆಚ್ಚಳ: ಇಲ್ಲಿದೆ ಎಲ್ಲ ಜಿಲ್ಲೆಗಳ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯದಲ್ಲಿಂದು ಕೊರೋನಾ ಭಾರಿ ಹೆಚ್ಚಳ: ಇಲ್ಲಿದೆ ಎಲ್ಲ ಜಿಲ್ಲೆಗಳ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು 933 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,76,000 ಗೆ ಏರಿಕೆಯಾಗಿದೆ.

ಇವತ್ತು 14 ಜನ ಸೋಂಕಿತರು ಮೃತಪಟ್ಟಿದ್ದಾರೆ. 704 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 37,794 ಜನ ಮೃತಪಟ್ಟಿದ್ದಾರೆ. 29,25,397 ಜನ ಗುಣಮುಖರಾಗಿದ್ದಾರೆ. 12,780 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇಕಡ 0.81 ರಷ್ಟು ಇದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 291 ಜನರಿಗೆ ಸೋಂಕು ತಗುಲಿದ್ದು, 5 ಜನ ಮೃತಪಟ್ಟಿದ್ದಾರೆ. 172 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 7623 ಸಕ್ರಿಯ ಪ್ರಕರಣಗಳು ಇವೆ.

ಜಿಲ್ಲಾವಾರು ಮಾಹಿತಿ:

ಬಾಗಲಕೋಟೆ 0, ಬೀದರ್ 0, ಚಾಮರಾಜನಗರ 4, ಚಿಕ್ಕಬಳ್ಳಾಪುರ 2, ಚಿತ್ರದುರ್ಗ 4, ದಾವಣಗೆರೆ 5, ಗದಗ 1, ಹಾವೇರಿ 1, ಕಲಬುರ್ಗಿ 2, ಕೊಪ್ಪಳ 2, ರಾಯಚೂರು 0, ರಾಮನಗರ 1, ವಿಜಯಪುರ 1, ಯಾದಗಿರಿ 2, ಬೆಂಗಳೂರು ನಗರ 291, ಚಿಕ್ಕಮಗಳೂರು 63, ದಕ್ಷಿಣಕನ್ನಡ 94, ಹಾಸನ 57, ಕೊಡಗು 48, ಮಂಡ್ಯ 42, ಮೈಸೂರು 76, ತುಮಕೂರು 54, ಉಡುಪಿ 77, ಉತ್ತರಕನ್ನಡ 40 ಹೊಸ ಪ್ರಕರಣ ವರದಿಯಾಗಿವೆ.

ಮೃತಪಟ್ಟವರ ಸಂಖ್ಯೆ:

ಬೆಳಗಾವಿ 1, ಬೆಂಗಳೂರು ನಗರ 5, ದಕ್ಷಿಣ ಕನ್ನಡ 3, ಹಾಸನ 2, ಮೈಸೂರು 1, ತುಮಕೂರು 1, ಉತ್ತರಕನ್ನಡ 1 ಸೇರಿ 14 ಜನ ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...