alex Certify BIG BREAKING: ಬೆಂಗಳೂರು, ಉಡುಪಿ, ದಕ್ಷಿಣ ಕನ್ನಡ ಸೇರಿ ರಾಜ್ಯದಲ್ಲಿಂದು ಕೊರೋನಾ ಸ್ಪೋಟ, ಸಕ್ರಿಯ ಪ್ರಕರಣ ಸಂಖ್ಯೆಯೂ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಬೆಂಗಳೂರು, ಉಡುಪಿ, ದಕ್ಷಿಣ ಕನ್ನಡ ಸೇರಿ ರಾಜ್ಯದಲ್ಲಿಂದು ಕೊರೋನಾ ಸ್ಪೋಟ, ಸಕ್ರಿಯ ಪ್ರಕರಣ ಸಂಖ್ಯೆಯೂ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಇಂದು ಕೂಡ ಕೊರೋನಾ ಸ್ಫೋಟವಾಗಿದ್ದು, ಒಂದೇ ದಿನ 1187 ಜನರಿಗೆ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 30,09,557 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು 6 ಜನ ಸೋಂಕಿತರು ಮೃತಪಟ್ಟಿದ್ದು, ಇದುವರೆಗೆ 38,346 ಜನ ಸಾವನ್ನಪ್ಪಿದ್ದಾರೆ. ಇವತ್ತು 275 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 29,60,890 ಜನ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡ ಏರಿಕೆಯಾಗಿದ್ದು, 10,292 ಸಕ್ರಿಯ ಪ್ರಕರಣ ಇವೆ. ಪಾಸಿಟಿವಿಟಿ ದರ ಶೇಕಡ 1.08 ರಷ್ಟಿದೆ.

ರಾಜಧಾನಿ ಬೆಂಗಳೂರಿನಲ್ಲಿ 923 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಮೂವರು ಮೃತಪಟ್ಟಿದ್ದಾರೆ. 125 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 8671 ಸಕ್ರಿಯ ಪ್ರಕರಣಗಳು ಇವೆ.

ಬಾಗಲಕೋಟೆ, ಬೀದರ್, ಚಿಕ್ಕಬಳ್ಳಾಪುರ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಇಂದು ಯಾವುದೇ ಪ್ರಕರಣ ವರದಿಯಾಗಿಲ್ಲ.

ಬೆಂಗಳೂರು ನಗರ 923, ಬೆಳಗಾವಿ 12, ದಕ್ಷಿಣಕನ್ನಡ 63, ಧಾರವಾಡ 15, ಕೊಡಗು 12, ಮಂಡ್ಯ 10, ಮೈಸೂರು 20, ತುಮಕೂರು 12, ಉಡುಪಿ 54 ಹೊಸ ಪ್ರಕರಣ ವರದಿಯಾಗಿವೆ. ಬೆಂಗಳೂರು ನಗರ 3, ದಕ್ಷಿಣ ಕನ್ನಡ, ತುಮಕೂರು, ಉತ್ತರ ಕನ್ನಡದಲ್ಲಿ ತಲಾ 1 ಸೇರಿ ರಾಜ್ಯದಲ್ಲಿ 6 ಜನ ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...