alex Certify ರಾಜ್ಯದ ಜನತೆಗೆ ಗುಡ್ ನ್ಯೂಸ್: ಕೊರೋನಾ ಮತ್ತಷ್ಟು ಇಳಿಕೆ, ಇಲ್ಲಿದೆ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ಜನತೆಗೆ ಗುಡ್ ನ್ಯೂಸ್: ಕೊರೋನಾ ಮತ್ತಷ್ಟು ಇಳಿಕೆ, ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 214 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. 7 ಜನ ಸೋಂಕಿತರು ಮೃತಪಟ್ಟಿದ್ದಾರೆ. 286 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 29,89,489 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 29,43,170 ಜನ ಗುಣಮುಖರಾಗಿದ್ದಾರೆ. 38,102 ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 8188 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇಕಡ 0.26 ರಷ್ಟು ಇದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 118 ಜನರಿಗೆ ಸೋಂಕು ತಗುಲಿದೆ. ಒಬ್ಬರು ಮೃತಪಟ್ಟಿದ್ದಾರೆ. 117 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 6381 ಸಕ್ರಿಯ ಪ್ರಕರಣಗಳು ಇವೆ.

ಜಿಲ್ಲಾವಾರು ಮಾಹಿತಿ:

ಬಳ್ಳಾರಿ 0, ಬೀದರ್ 0, ಚಾಮರಾಜನಗರ 0, ದಾವಣಗೆರೆ 0, ಗದಗ 0, ಹಾವೇರಿ 0, ಕಲಬುರ್ಗಿ 0, ಕೊಪ್ಪಳ 0, ರಾಯಚೂರು 1, ರಾಮನಗರ 0, ಶಿವಮೊಗ್ಗ 1, ವಿಜಯಪುರ 0, ಯಾದಗಿರಿ 0, ಬೆಂಗಳೂರು ನಗರ 118, ದಕ್ಷಿಣಕನ್ನಡ 10, ಮೈಸೂರು 25, ಉತ್ತರಕನ್ನಡ 11 ಹೊಸ ಪ್ರಕರಣ ವರದಿಯಾಗಿವೆ.

ಮೃತಪಟ್ಟವರ ಸಂಖ್ಯೆ:

ಬೆಂಗಳೂರು ನಗರ 1, ದಕ್ಷಿಣಕನ್ನಡ 1, ಕಲಬುರ್ಗಿ 1, ಮಂಡ್ಯ 1, ಮೈಸೂರು 1, ರಾಯಚೂರು 1 ಸೇರಿ ರಾಜ್ಯದಲ್ಲಿ 7 ಜನ ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...