alex Certify ಕಿಡ್ನಿ ಮಾರಾಟ ಮಾಡಲು ಹೋಗಿ 8 ಲಕ್ಷ ರೂ. ಪಂಗನಾಮ ಹಾಕಿಸಿಕೊಂಡ ಮಹಿಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಡ್ನಿ ಮಾರಾಟ ಮಾಡಲು ಹೋಗಿ 8 ಲಕ್ಷ ರೂ. ಪಂಗನಾಮ ಹಾಕಿಸಿಕೊಂಡ ಮಹಿಳೆ..!

ಆನ್​​ಲೈನ್​​ನಲ್ಲಿ ಕಿಡ್ನಿ ಮಾರಾಟ ಮಾಡಲು ಮುಂದಾಗಿದ್ದ ಮಹಿಳೆಗೆ ಸೈಬರ್​ ಕಳ್ಳರು ಬರೋಬ್ಬರಿ 8 ಲಕ್ಷ ರೂಪಾಯಿ ಪಂಗನಾಮ ಹಾಕಿದ್ದು ಈ ಸಂಬಂಧ ಬೆಂಗಳೂರು ಮೂಲದ ಮಹಿಳಾ ಉದ್ಯಮಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಉದ್ಯಮವನ್ನು ನಡೆಸುತ್ತಿದ್ದ ಮಹಿಳೆಗೆ ತನ್ನ ಉದ್ಯಮವನ್ನು ಇನ್ನಷ್ಟು ವಿಸ್ತರಿಸಲು ಹಣದ ಅವಶ್ಯಕತೆ ಇತ್ತು. ಇದೇ ಸಂದರ್ಭದಲ್ಲಿ ಆಕೆ ಆನ್​ಲೈನ್​ನಲ್ಲಿ ಕಿಡ್ನಿ ದಾನಿಗಳು ಬೇಕಾಗಿದ್ದಾರೆ ಎಂಬ ಜಾಹೀರಾತನ್ನು ನೋಡಿದ್ದಾರೆ.

ಜಾಹೀರಾತಿನಲ್ಲಿ ನಮೂದಿಸಲಾಗಿದ್ದ ಸಂಖ್ಯೆಗೆ ಮಹಿಳೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ಮತ್ತೊಬ್ಬ ಮಹಿಳೆ ತಮ್ಮನ್ನ ತಾವು ಡಾ. ಸೀಮಾ ರೈ ಎಂದು ಪರಿಚಯ ಮಾಡಿಕೊಂಡಿದ್ದರು. ಕಿಡ್ನಿ ದಾನ ಮಾಡಿದವರಿಗೆ 1 ಕೋಟಿ ರೂಪಾಯಿ ಹಣ ನೀಡೋದಾಗಿ ಹೇಳಿದ್ದರು. ಆದರೆ ಸೀಮಾ ಎಂದು ಹೇಳಿಕೊಂಡ ಮಹಿಳೆ ವಿವಿಧ ಶುಲ್ಕಗಳ ಹೆಸರನ್ನು ಹೇಳಿ ದೂರುದಾರ ಮಹಿಳೆಯಿಂದ ಹಣ ಪೀಕಲು ಆರಂಭಿಸಿದ್ದಳು.

ಏಪ್ರಿಲ್​ನಿಂದ ಆಗಸ್ಟ್​ ತಿಂಗಳೊಳಗಾಗಿ ಮಹಿಳೆಯು ಬರೋಬ್ಬರಿ 8 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿದ ಮಹಿಳೆಯು, ಸೀಮಾ ರೈ ಎಂಬಾಕೆ ನನಗೆ ಕಿಡ್ನಿ ದಾನ ಮಾಡಿದಲ್ಲಿ 1 ಕೋಟಿ ರೂಪಾಯಿ ನೀಡೋದಾಗಿ ನಂಬಿಸಿದ್ದರು. ಇದಾದ ಬಳಿಕ ದಾನಿಯ ಜಾಗದಲ್ಲಿ ಹೆಸರು ನೋಂದಾಯಿಸಲು 6999 ರೂಪಾಯಿ ಶುಲ್ಕ ಭರಿಸುವಂತೆ ಹೇಳಿದ್ದರು. ಇದಾದ ಬಳಿಕ ವಿವಿಧ ಕಾರಣ ನೀಡಿ ಹಣ ಪೀಕುತ್ತಲೇ ಹೋಗಿದ್ದಾರೆ ಎಂದು ಹೇಳಿದ್ರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...