alex Certify BREAKING: ತಡರಾತ್ರಿ ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವ ಘಟನೆ, ನಿಗೂಢ ಸ್ಪೋಟದಿಂದ ನಿವಾಸಿಗಳಲ್ಲಿ ಭಾರಿ ಆತಂಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ತಡರಾತ್ರಿ ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವ ಘಟನೆ, ನಿಗೂಢ ಸ್ಪೋಟದಿಂದ ನಿವಾಸಿಗಳಲ್ಲಿ ಭಾರಿ ಆತಂಕ

ಬೆಂಗಳೂರಿನ ಮನೆಯೊಂದರಲ್ಲಿ ಸ್ಫೋಟಗಳು ಸಂಭವಿಸಿ ದಂಪತಿ ಗಾಯಗೊಂಡಿದ್ದಾರೆ. ವಿಜಯನಗರದ ಹಂಪಿ ನಗರ ಮನೆಯಲ್ಲಿ ನಿಗೂಢ ಸ್ಫೋಟ ಸಂಭವಿಸಿದೆ. ಎರಡು ಮಹಡಿ ಕಟ್ಟಡದ ಮೊದಲ ಮಹಡಿಯಲ್ಲಿ ಸ್ಪೋಟ ಉಂಟಾಗಿದೆ.

ತಡ ರಾತ್ರಿ 12 45 ಸುಮಾರಿಗೆ ಸ್ಪೋಟ ಸಂಭವಿಸಿ ಸೂರ್ಯನಾರಾಯಣ ಶೆಟ್ಟಿ ಮತ್ತು ಪುಷ್ಪಾವತಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟದ ರಭಸಕ್ಕೆ ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಅಕ್ಕಪಕ್ಕದ ಮನೆಯ ಗಾಜುಗಳು ಪುಡಿಯಾಗಿ ಗೋಡೆಗಳು ಬಿರುಕು ಮೂಡಿವೆ. ಅಕ್ಕಪಕ್ಕದ ಐದಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಮನೆಯ ಮುಂದೆ ಹಾದು ಹೋಗಿದ್ದ ವಿದ್ಯುತ್ ತಂತಿ ಕಟ್ ಆಗಿದೆ.

ಸುಮಾರು ಒಂದು ಕಿಲೋಮೀಟರ್ ದೂರದವರೆಗೂ ಸ್ಫೋಟದ ಸದ್ದು ಕೇಳಿದೆ. ಸ್ಥಳಕ್ಕೆ ವಿಜಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...