ಬೆಂಗಳೂರಿನ ಮನೆಯೊಂದರಲ್ಲಿ ಸ್ಫೋಟಗಳು ಸಂಭವಿಸಿ ದಂಪತಿ ಗಾಯಗೊಂಡಿದ್ದಾರೆ. ವಿಜಯನಗರದ ಹಂಪಿ ನಗರ ಮನೆಯಲ್ಲಿ ನಿಗೂಢ ಸ್ಫೋಟ ಸಂಭವಿಸಿದೆ. ಎರಡು ಮಹಡಿ ಕಟ್ಟಡದ ಮೊದಲ ಮಹಡಿಯಲ್ಲಿ ಸ್ಪೋಟ ಉಂಟಾಗಿದೆ.
ತಡ ರಾತ್ರಿ 12 45 ಸುಮಾರಿಗೆ ಸ್ಪೋಟ ಸಂಭವಿಸಿ ಸೂರ್ಯನಾರಾಯಣ ಶೆಟ್ಟಿ ಮತ್ತು ಪುಷ್ಪಾವತಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟದ ರಭಸಕ್ಕೆ ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಅಕ್ಕಪಕ್ಕದ ಮನೆಯ ಗಾಜುಗಳು ಪುಡಿಯಾಗಿ ಗೋಡೆಗಳು ಬಿರುಕು ಮೂಡಿವೆ. ಅಕ್ಕಪಕ್ಕದ ಐದಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಮನೆಯ ಮುಂದೆ ಹಾದು ಹೋಗಿದ್ದ ವಿದ್ಯುತ್ ತಂತಿ ಕಟ್ ಆಗಿದೆ.
ಸುಮಾರು ಒಂದು ಕಿಲೋಮೀಟರ್ ದೂರದವರೆಗೂ ಸ್ಫೋಟದ ಸದ್ದು ಕೇಳಿದೆ. ಸ್ಥಳಕ್ಕೆ ವಿಜಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.